ಆಟೋಚಾಲಕರಿಗೆ 25 ಸಾವಿರ ರೂ. ನೀಡಿ:ಕಟ್ಟಿಮನಿ

ಚಿಂಚೋಳಿ ಮೇ 3 ಯಾವುದೇ ಮುನ್ಸೂಚನೆ ನೀಡದೆ ಲಾಕಡೌನ್ ಮಾಡಿದ್ದರಿಂದ ಚಿಂಚೋಳಿ ತಾಲೂಕಿನ ಮತ್ತು ಚಿಂಚೋಳಿ ಪಟ್ಟಣದ ಆಟೋ ಚಾಲಕರ ಕುಟುಂಬಗಳು ಆರ್ಥಿಕವಾಗಿ ಕುಂಠಿತವಾಗಿದೆ. ಆದ್ದರಿಂದ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ 25 ಸಾವಿರ ಆರ್ಥಿಕ ಪರಿಹಾರ ನೀಡಬೇಕು ಚಿಂಚೋಳಿ ತಾಲೂಕ ಆಟೋ ಚಾಲಕರ ಸಂಘದ ಅಧ್ಯಕ್ಷ ಗೋಪಾಲರಾವ ಕಟ್ಟಿಮನಿ ಅವರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಹಾಗೂ ಆಟೋಚಾಲಕರ ಕುಟುಂಬಗಳಿಗೆ ಈಗಾಗಲೇ ಬಹಳಷ್ಟು ಸಂಕಷ್ಟದಲ್ಲಿದ್ದಾರೆ ಅವರ ಸಮಸ್ಯೆಗಳನ್ನು ಯಾವೊಬ್ಬ ಅಧಿಕಾರಿಗಳು ಕೇಳಿಲ್ಲ ಮತ್ತು ಜನಪ್ರತಿನಿಧಿಗಳು ಕೂಡ ಕೇಳದೆ ಇರುವುದು ಆಟೋ ಚಾಲಕರ ಕುಟುಂಬಗಳಿಗೆ ದಿಕ್ಕುತೋಚದಂತಾಗಿದೆ ಕೂಡಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರ ಆಟೋ ಚಾಲಕರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಚಿಂಚೋಳಿ ತಾಲೂಕ ಆಟೋ ಚಾಲಕರ ಸಂಘದ ಅಧ್ಯಕ್ಷ ಗೋಪಾಲರಾವ ಕಟ್ಟಿಮನಿ ಅವರು ಆಗ್ರಹಿಸಿದ್ದಾರೆ