ಆಟೋಚಾಲಕರಿಗೆ ಸಮವಸ್ತ್ರ ವಿತರಣೆ

ಬಳ್ಳಾರಿ, ಜ.1: ಹೊಸ ವರ್ಷದ ಅಂಗವಾಗಿ‌ ನಗರದ ಗಂಗಪ್ಪ ಜಿನ್ ಗಣೇಶ್ ಗುಡಿ ಹತ್ತಿರ ಹೊಸದಾಗಿ ಆಟೋ ನಿಲ್ದಾಣವನ್ನು ಇಂದು ಉದ್ಘಾಟನೆ, ಉಚಿತವಾಗಿ ಯೂನಿಫಾರ್ಮ್, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಇಂದು‌ ನಡೆಯಿತು.
ಈ ಕಾರ್ಯಕ್ರಮಕ್ಕೆ ಬಿಜೆಪಿ ಯುವ ಮುಖಂಡ ಕೆ.ಎಸ್ ಅಶೋಕ್ ಕುಮಾರ್, ಸಂಚಾರಿ ಠಾಣೆ, ಸಿಪಿಐ ನಾಗರಾಜ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಮವಸ್ತ್ರ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಹುಂಡೇಕರ್ ರಾಜೇಶ್, ಗೋವರ್ಧನ್, ಫಾರೂಕ್, ತಿಪ್ಪಯ್ಯ, ಪ್ರಶಾಂತ್, ರಾಕೇಶ್, ಪವನ್ ಮತ್ತು ನಿಲ್ದಾಣದ ಚಾಲಕರು ಭಾಗವಹಿಸಿದ್ದರು.