ಆಟೋಗೆ ಬುಲೆರೋ ಡಿಕ್ಕಿ: ಇಬ್ಬರ ಸಾವು

ಕಲಬುರಗಿ,ಮೇ.5-ಆಟೋಗೆ ಬುಲೆರೋ ಜೀಪ್ ಡಿಕ್ಕಿ ಹೊಡೆದು ಆಟೋದಲ್ಲಿದ್ದ ಇಬ್ಬರು ಮೃತಪಟ್ಟು, ಆರು ಜನರು ಗಾಯಗೊಂಡ ಘಟನೆ ಸುಲ್ತಾನಪುರ-ಕಲ್ಲಹಂಗರಗಾ ರಸ್ತೆಯ ಇಟ್ಟಂಗಿ ಭಟ್ಟಿ ಹತ್ತಿರ ಗುರುವಾರ ರಾತ್ರಿ 9.30ರ ಸುಮಾರಿಗೆ ನಡೆದಿದೆ.
ಮೃತರನ್ನು ನಂದಿಕೂರ ಗ್ರಾಮದ ತುಳಜಾಬಾಯಿ ಗಂಡ ಶಿವಲಿಂಗಪ್ಪ ಭಜಂತ್ರಿ (60) ಮತ್ತು ಕಲಬುರಗಿಯ ಬ್ರಹ್ಮಪುರ ವಡ್ಡರಗಲ್ಲಿಯ ಧರ್ಮಣ್ಣ ತಂದೆ ಈರಣ್ಣ ಭಜಂತ್ರಿ (40), ಎಂದು ಗುರುತಿಸಲಾಗಿದೆ. ಭಾಗಮ್ಮ, ನೀಲಮ್ಮ, ರೇಣುಕಾ ಸೇರಿದಂತೆ 6 ಜನರು ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ನಂತರ ಆಟೋ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಇವರು ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ ಮಹಾಪುರತಾಯಿ ದೇವಸ್ಥಾನಕ್ಕೆ ಅಡುಗೆ ಮಾಡಲು ಆಟೋದಲ್ಲಿ ಹೊರಟಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.