ಆಟೋಗಳಿಗೆ ಅಕ್ರಮವಾಗಿ ಅಡುಗೆ ಅನಿಲ ರಿಫಿಲ್ಲಿಂಗ್:ಓರ್ವನ ಬಂಧನ ಸಿಲಿಂಡರ್, ರಿಫಿಲ್ಲಿಂಗ್ ಯಂತ್ರ ಸೇರಿ 21 ಸಾವಿರ ರೂ.ಮೌಲ್ಯದ ವಸ್ತು ಜಪ್ತಿ

ಕಲಬುರಗಿ,ಆ.31-ನಗರದ ನೂರಾನಿ ಮೊಹಲ್ಲಾದ ಪೀರ್ ಬಂಗಾಲಿ ದರ್ಗಾ ಹಿಂದುಗಡೆಯ ಖುಲ್ಲಾ ಜಾಗದಲ್ಲಿರುವ ಶೆಡ್‍ನಲ್ಲಿ ಪರವಾನಿಗೆ ಇಲ್ಲದೆ ಅಡುಗೆ ಸಿಲಿಂಡರ್‍ಗಳನ್ನು ಆಟೋಗಳಿಗೆ ತುಂಬಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕಿ ಭಾರತಿ ಪಾಟೀಲ, ರೋಜಾ ಪಿ.ಐ.ಅನೀಸ್ ಅಹ್ಮದ್ ಎ.ಮುಜಾವರ್, ಸಿಬ್ಬಂದಿಗಳಾದ ಬಸವರಾಜ, ದೇವರಾಜ, ಕಾಶೀನಾಥ, ಶಾರೂಖ್ ಖಾನ್ ಮತ್ತು ರಾಜಕುಮಾರ ಅವರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಆಟೋ ಚಾಲಕರು ಪರಾರಿಯಾಗಿದ್ದು, ಆಟೋಗಳಿಗೆ ಅಕ್ರಮವಾಗಿ ಅಡುಗೆ ಅನಿಲ ರಿಫಿಲ್ಲಿಂಗ್ ಮಾಡುತ್ತಿದ್ದ ಹೌಸಿಂಗ್ ಬೋರ್ಡ್ ಕಾಲೋನಿಯ ನಯೀಮ್ ಅಹ್ಮದ್ (44) ಎಂಬಾತನನ್ನು ಬಂಧಿಸಿ 2000 ರೂ.ಮೌಲ್ಯದ ಒಂದು ಸಿಲಿಂಡರ್, 1500 ರೂ.ಮೌಲ್ಯದ ಅರ್ಧ ತುಂಬಿದ ಸಿಲಿಂಡರ್, 9 ಸಾವಿರ ರೂ.ಮೌಲ್ಯದ 9 ಖಾಲಿ ಸಿಲಿಂಡರ್, 3000 ರೂ.ಮೌಲ್ಯದ ತೂಕದ ಯಂತ್ರ, 5000 ರೂ.ಮೌಲ್ಯದ 2 ರಿಫಿಲ್ಲಿಂಗ್ ಯಂತ್ರ, 650 ರೂ.ನಗದು ಸೇರಿ 21,150 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.