ಆಟೊ ಚಾಲಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೋಲಿಸರು

ಬೀದರ್: ಜೂ.11:ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ, ಆಟೋಗಳಲ್ಲಿ ಅನಾವಶ್ಯಕವಾಗಿ ಪ್ರಯಾಣಿಕರನ್ನು ಕೂಡಿಸುತ್ತಿದ್ದ ಅಟೋ ಚಾಲಕರಿಗೆ ಪೆÇಲೀಸರು ಬಿಸಿ ಮುಟ್ಟಿಸಿದ್ದಾರೆ. ಬೆಳಿಗ್ಗೆಯಿಂದ ಪೀಲ್ಡ್‍ಗಿಳಿದ ಸಂಚಾರಿ ಪೆÇಲೀಸರು, ಅವಶ್ಯಕತೆಗಿಂತ ಹೆಚ್ಚಿನ ಪ್ರಯಾಣಿಕರನ್ನು ಆಟೋದಲ್ಲಿ ಕೂಡಿಸಿ ಸಂಚಾರ ಮಾಡುತ್ತಿದ್ದ ಆಟೋಗಳನ್ನು ತಡೆದು, ಹೆಚ್ಚುವರಿ ಸೀಟ್‍ಗಳನ್ನು ಬಿಚ್ಚಿದ್ದಾರೆ.

ನಗರದ ಹರಳಯ್ಯ ಚೌಕ್, ಬಸವೇಶ್ವರ ಚೌಕ್ ಸೇರಿದಂತೆ ಪ್ರಮುಖ ವೃತ್ತದಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರಿ ಪೆÇಲೀಸರು, ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋಗಳನ್ನ ಪರಿಶೀಲನೆ ನಡೆಸಿ, ಸೀಟ್ ಬಿಚ್ಚಿದ್ದಾರೆ. ಹೆಚ್ಚುವರಿ ಲಾಭ ಪಡೆಯುವ ಉದ್ದೇಶದಿಂದ ಆಟೋ ಚಾಲಕರು,ಹೆಚ್ಚುವರಿಗಾಗಿ ಡ್ರೈವರ್ ಪಕ್ಕದಲ್ಲಿ ಸೀಟ್ ಅಳವಡಿಸಿ, ಬೇಕಾಬಿಟ್ಟಿಯಾಗಿ ಆಟೋ ಓಡಿಸುತ್ತಿದ್ದರು. ಅಂತಹ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಬೀದರ್ ಸಂಚಾರಿ ಪೆÇಲೀಸರು, ಇನ್ನು ಮುಂದೆ ಆಟೋಗಳಲ್ಲಿ ಮೂವರು ಪ್ರಯಾಣಿಕರಿಗಿಂತ ಹೆಚ್ಚುವರಿ ಪ್ರಯಾಣಿಕರನ್ನ ಕರೆದೊಯ್ಯದಂತೆ ಸೂಚನೆ ನೀಡಿ ಸಂಚಾರಿ ನಿಯಮ ಪಾಲಿಸುವಂತೆ ತಿಳಿಸಿದ್ದಾರೆ.