ಆಟಿಕೆ ಕ್ಲಸ್ಟರ್ ತಮ್ಮ ಸರ್ಕಾರದ ಕೂಸು: ಎಚ್ ಡಿಕೆ

ಬೆಂಗಳೂರು, ಜ 9-ಕೊಪ್ಪಳದಲ್ಲಿ ಸ್ಥಾಪಿಸಲು ಮುಂದಾಗಿರುವ ಆಟಿಕೆ ಕ್ಲಸ್ಟರ್ ತಮ್ಮ ಸರ್ಕಾರದ ಯೋಜನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರುಆಟ, ಚೀನಾ ಕಪಿಮುಷ್ಠಿಯಲ್ಲಿರುವ ಜಾಗತಿಕ ಉತ್ಪಾದನೆಯಲ್ಲಿ ದೇಶದ ಪಾಲು ಪಡೆಯುವ ನಿಟ್ಟಿನಲ್ಲಿ ತಾವು ಸಿಎಂ ಆಗಿದ್ದ ವೇಳೆ ಚೀನಾ ಜತೆ‌ ಸ್ಪರ್ಧೆ ರೂಪಿಸಲಾಗಿತ್ತು.‌ ಇದಕ್ಕಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಆತ್ಮನಿರ್ಬರ್ ಯೋಜನೆಯಡಿ ಆಟಿಕೆ ಉತ್ಪಾದನಾ ಘಟಕ ಆರಂಭಿಸುತ್ತಿರು ವುದಾಗಿ ಹೇಳುತ್ತಿದ್ದು, ಆತ್ಮನಿರ್ಬರ್ ಯೋಜನೆಗೂ ಮುಂಚಿತವಾಗಿ ನಮ್ಮ ಸರ್ಕಾರ ಈ ಕಲ್ಪನೆ ಹೊಂದಿತ್ತು ಎಂದಿದ್ದಾರೆ.
ರೂ.7 ಲಕ್ಷ ಕೋಟಿ ಮೊತ್ತದ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಚೀನಾ ಪ್ರಾಬಲ್ಯವಿದೆ. ಇದರಲ್ಲಿ ಅಲ್ಪ ಪಾಲು ಕಸಿದರೂ ನಮ್ಮವರಿಗೆ ಉದ್ಯೋಗ ನೀಡಬಹುದು. ಆದಾಯ ಕೂಡಿದ ಬೇಕೆಂಬುದು ನನ್ನ ಸರ್ಕಾರದ ದೂರದೃಷ್ಟಿಯಾಗಿತ್ತು. ಅದಕ್ಕೆ ಮರು ಚಾಲನೆ ನೀಡಿ , ತಮ್ಮ ಯೋಜನೆಯನ್ನು ಅನುಸರಿಸುತ್ತಿರುವ ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.