ನವದೆಹಲಿ,ಜು.28-ಅರುಣಾಚಲ ಪ್ರದೇಶದ ಮೂವರು ಮಹಿಳಾ ಅಥ್ಲೀಟ್‌ಗಳಾದ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್‌ಗೆ ದೆಹಲಿಯ ಚೀನಾ ರಾಯಭಾರ ಕಚೇರಿ ವೀಸಾ” ನೀಡಿದ ಬೆನ್ನಲ್ಲೆ ತಡರಾತ್ರಿ ಭಾರತ ,ವುಶು ತಂಡದ ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟಕ್ಕಾಗಿ ಚೀನಾದ ಚೆಂಗ್ಡುಗೆ ಪ್ರವಾಸ ರದ್ದುಗೊಳಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯಹಹಾರಗಳ ಸಚಿವಾಲಯ ವಕ್ತಾರ ಅರೀಂದಮ್ ಬಾಗ್ಚಿ, ಚೀನಾದ ವೀಸಾ “ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ.
ಎಂಟು ಅಥ್ಲೀಟ್‌ಗಳು ಮತ್ತು ನಾಲ್ವರು ಅಧಿಕಾರಿಗಳನ್ನು ಒಳಗೊಂಡ ವುಶು ತಂಡ ತಡರಾತ್ರಿ ಕ್ಯಾಥೆ ಪೆಸಿಫಿಕ್ ವಿಮಾನದಲ್ಲಿ ಚೀನಾಕ್ಕೆ ತೆರಳಬೇಕಿತ್ತು. ಅವರನ್ನು ದೆಹಲಿ-ಹಾಂಗ್ ಕಾಂಗ್-ಚೆಂಗ್ಡು ಮಾರ್ಗದಲ್ಲಿ ಬುಕ್ ಮಾಡಲಾಗಿತ್ತು. ದೆಹಲಿ ವಿಮಾನ ನಿಲ್ದಾಣದಲ್ಲಿ, ವಲಸೆ ಅಧಿಕಾರಿಗಳು ಮೂವರು ಅರುಣಾಚಲ ಆಟಗಾರರಿಗೆ ನೀಡಲಾದ ಸ್ಟೇಪಲ್ಡ್ ವೀಸಾಕ್ಕೆ ವಿರೋಧಿಸಿ ಸಮ್ಮತಿ ನೀಡಲು ನಿರಾಕರಿಸಿದ್ದಾರೆ ಎಂದಿದ್ದಾರೆ.
ಅರುಣಾಚಲದ ಆಟಗಾರರಿಗೆ ಮಾತ್ರ ಚೀನಾ ರಾಯಭಾರ ಕಚೇರಿಯಿಂದ ಸ್ಟೇಪಲ್ಡ್ ವೀಸಾಗಳನ್ನು ನೀಡಲಾಗಿದ್ದು, ಇತರರು ಸಾಮಾನ್ಯ ವೀಸಾಗಳನ್ನು ಪಡೆದಿದ್ದಾರೆ ಎಂದು ಭಾರತೀಯ ವುಶು ತಂಡದಲ್ಲಿನ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ತಿಳಿಸಿದ್ದಾರೆ.
ಚೀನಾಕ್ಕೆ ಪ್ರಯಾಣಿಸಲು ಅನುಮತಿ ನಿರಾಕರಿಸಿದ ನಂತರ, ತಂಡ ವಿಮಾನ ನಿಲ್ದಾಣದಿಂದ ಹಿಂತಿರುಗಿದೆ ಎಂದಿದ್ದಾರೆ.
ಆಂತರಿಕವಾಗಿ ವಿಷಯವನ್ನು ಪರಿಶೀಲಿಸಿದ ನಂತರ ಮಲ್ಟಿಸ್ಪೋರ್ಟ್ ಈವೆಂಟ್‌ಗೆ ತಂಡದ ಪ್ರಯಾಣವನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿತು. ಅರುಣಾಚಲ ಪ್ರದೇಶದ ಮೂವರು ಅಥ್ಲೀಟ್‌ಗಳು ಭಾರತದ ಅಧಿಕೃತ ವುಶುವಿನ ಭಾಗವಾಗಿದ್ದಾರೆ
ಚೀನಾಕ್ಕೆ ಪ್ರಯಾಣಿಸಲು ಅನುಮತಿ ನಿರಾಕರಿಸಿದ ನಂತರ, ತಂಡ ವಿಮಾನ ನಿಲ್ದಾಣದಿಂದ ಹಿಂತಿರುಗಿತು ಎಂದಿದ್ದಾರೆ.
ಆಂತರಿಕವಾಗಿ ವಿಷಯವನ್ನು ಪರಿಶೀಲಿಸಿದ ನಂತರ ಮಲ್ಟಿಸ್ಪೋರ್ಟ್ ಈವೆಂಟ್‌ಗೆ ತಂಡದ ಪ್ರಯಾಣ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಮೂವರು ಅಥ್ಲೀಟ್‌ಗಳು ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಭಾರತದ ಅಧಿಕೃತ ವುಶು ತಂಡದ ಭಾಗವಾಗಿದ್ದಾರೆ. ಚೀನಾದ ರಾಯಭಾರ ಕಚೇರಿಯ ಅಧಿಕಾರಿಗಳು ನೀಡಿದ ವಿಶೇಷ ವೀಸಾಗಳು ಏಷ್ಯಾಡ್‌ನಲ್ಲಿಯೂ ಭಾಗವಹಿಸುವಂತೆ ಮಾಡಿದೆ.