ಆಟಕ್ಕುಂಟು ಲೆಕ್ಕಕ್ಕಿಲ್ಲ ಮಾನ್ವಿ ಶಿಕ್ಷಣಾಧಿಕಾರಿ ಚಂದ್ರಶೇಖರ

ಸಂಜೆವಾಣಿ ವಿಶೇಷ
ಮಾನ್ವಿ,ಮಾ.೦೫- ಶಿಕ್ಷಣ ಇಲಾಖೆಯವರು ಒಂದು ತಪ್ಪು ಹೆಜ್ಜೆಯನ್ನಿಟ್ಟರೆ ಬಡ ಮಕ್ಕಳ ಭವಿಷ್ಯವೇ ಅಂಧಕಾರದಲ್ಲಿ ಮುಳುಗುವುದು ಮಾತ್ರ ಶತಸಿದ್ಧ ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜ್ಞಾವಂತ ನಾಗರಿಕರ ಎನ್ನುವ ಮಾತಿಗೆ ಬದ್ರಬುನಾದಿಯೇ ಶಿಕ್ಷಣ ಎಂದು ಭಾರತದ ಸಂವಿಧಾನವೇ ಹೇಳುತ್ತದೆ ಆದರೆ ಮಾನ್ವಿ ಶಿಕ್ಷಣ ಇಲಾಖೆ ಅಧಿಕಾರಿ ಚಂದ್ರಶೇಖರ ಆಗಲಿ ಗುಂಪುಗಳ ಕಟ್ಟಿ ರಾಜಕೀಯ ಮಾಡುವ ಶಿಕ್ಷಕರೇ ಆಗಿರಲಿ ಸ್ವಲ್ಪ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ನೀಡುವಂತೆ ಕಾರ್ಯಪ್ರವೃತ್ತರಾಗುತ್ತಾರ ಶಿಕ್ಷಣಾಧಿಕಾರಿ ಚಂದ್ರಶೇಖರ.
ಪ್ರಮುಖವಾಗಿ ಇಂದಿನ ಗ್ರಾಮೀಣ ಭಾಗದ ಅನೇಕ ಶಿಕ್ಷಕರು ಶಾಲೆಗೆ ಗೈರುಹಾಜರಿಯಲ್ಲಿದ್ದು ಸಂಬಳಕ್ಕೆ ಮಾತ್ರ ಸರಿಯಾಗಿ ಹಾಜರಿಯಾಕುತ್ತಾರೆ, ಅನೇಕ ಶಿಕ್ಷಕರು ಅಂತರಜಾಲದಲ್ಲಿ ವಿದೇಶೀ ವಿನಿಮಯ ಹಣ ಗಳಿಸುವಲ್ಲಿ ಮತ್ತು ತಮ್ಮಂತೆಯೇ ಇತರರನ್ನು ಈ ದಂದ್ಧೆಯಲ್ಲಿ ಭಾಗವಹಿಸಲು ಪ್ರೇರೇಪಿಸುತ್ತಿದ್ದಾರೆ, ಬಡವರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ,(ಆರ್ ಟಿ ಇ) ಅಡಿಯಲ್ಲಿ ಸರಿ ಸುಮಾರು ಅನೇಕ ಶಿಕ್ಷಕರು ಸರ್ಕಾರಿ ನೌಕರರಾಗಿದ್ದು ಅನೇಕ ಖಾಸಗಿ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ಪಡೆದು ಬಡವರಿಗೆ ಸೇರಿದಂತೆ ಸರ್ಕಾರಕ್ಕೂ ವಂಚನೆ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕರು ದೂರು ನೀಡಿದರು ಕೂಡ ಯಾವುದೇ ಕ್ರಮ ಕೈಗೊಳದೆ ಕೈಲಾಗದವರಂತೆ ಕುಳಿತಿರುವುದು, ಅನೇಕ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದರೂ ಆ ಶಾಲೆಯ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರನ್ನಾಗಿ ಬೇರೆ ಶಾಲೆ ಕಳಿಸುವ ಕೆಟ್ಟ ಪದ್ದತಿಯನ್ನು ಅನುಸರಿಸುವುದು, ಗುತ್ತಿಗೆದಾರರ ಜೊತೆ ಒಳ ಒಪ್ಪಂದ ಮಾಡಿಕೊಂಡು ಕಳೆಪೆ ಮಟ್ಟದ ಆಹಾರ,ಬಟ್ಟೆ, ಬೂಟು, ವಿತರಣೆ ಮಾಡುವುದು, ಸಂಘ ಸಂಸ್ಥೆ ಹೆಸರಿನಲ್ಲಿ ರಾಜಕೀಯ ಮಾಡುವುದು, ಶಾಲೆಯನ್ನು ಬಿಟ್ಟು ರಾಜಕೀಯ ಸಮಾರಂಭಗಳಲ್ಲಿ ಭಾಗಿಯಾಗುವ ಅನೇಕರಿಗೆ ನೋಟಿಸ್ ನೀಡದಿರುವುದು, ಸೇರಿದಂತೆ ಮೊನ್ನೆ ಪೋತ್ನಾಳ್ ಗ್ರಾಮದ ನಡೆದ ಜಿಲ್ಲಾಮಟ್ಟದ ಶೈಕ್ಷಣಿಕ ಕಲಿಕಾ ಹಬ್ಬಕ್ಕೆ ಯಾವ ಮಾಧ್ಯಮದವರನ್ನಾಗಲಿ ಸರ್ವರಿಗೂ ಮಾಹಿತಿ ನೀಡಿದೆ ಕಾರ್ಯಕ್ರಮ ಮಾಡಿದ್ದು ಕೂಡ ದೊಡ್ಡ ಅಪವಾದವಾಗಿದೆ ಎಂದು ಸಾರ್ವಜನಿಕರು ಮಾತಾನಾಡಿಕೊಳ್ಳುತ್ತಿದ್ದಾರೆ..
ಕೇವಲ ಸಂಬಳಕ್ಕಾಗಿ ಈ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು ಖಂಡಿತವಾಗಿ ಈ ಮನುಜ ಕುಲಕ್ಕೆ ಅವಶ್ಯಕತೆ ಇಲ್ಲ ಯಾಕೆಂದರೆ ಅವರಿಂದ ದೇಶದ ಪ್ರಜೆಗಳು ನಿರ್ಮಾಣವಾಗುತ್ತಾರೆ ಎನ್ನುವ ಸಾಮಾನ್ಯ ಪ್ರಜ್ಞೆ ಶಿಕ್ಷಣಾಧಿಕಾರಿಗೆ ಇರಬೇಕಾಗಿದೆ.
ದಾಖಲಾತಿ ವಿವರಗಳೊಂದಿಗೆ ಮುಂದಿನ ಬರಹದಲ್ಲಿ ಸವಿಸ್ತಾರವಾಗಿ ತಿಳಿಸಲಾಗುತ್ತದೆ..