ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾದ ಹೊಸ ತಾಲೂಕುಗಳು

ಲಕ್ಷ್ಮೇಶ್ವರ,ಮೇ23: ಈಗ ಮತ್ತೆ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಆಯ್ಕೆಯಾಗಿದ್ದು ಅವರೇ ಘೋಷಿಸಿದ ಹೊಸ ತಾಲೂಕುಗಳಿಗೆ ಮುಕ್ತಿ ನೀಡುವರೆಂಬುದನ್ನು ಹೊಸ ತಾಲೂಕುಗಳ ಜನತೆ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ.
2017 ಡಿಸೆಂಬರ್ 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಕ್ಷ್ಮೇಶ್ವರ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಇದನ್ನು ಘೋಷಿಸಿದರು ಇದರೊಂದಿಗೆ ಹೊಸ 43 ತಾಲ್ಲೂಕುಗಳು ರಚನೆಯಾಗಿದ್ದವು.
ಆದರೆ ಕಳೆದ ಆರು ವರ್ಷಗಳಿಂದಲೂ ಈ ಹೊಸ ತಾಲೂಕುಗಳಿಗೆ ಯಾವುದೇ ಇಲಾಖೆಗಳ ಕಚೇರಿಗಳು ಆರಂಭವಾಗದಿರುವುದು ಹೊಸ ತಾಲೂಕುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಸದ್ಯ ಲಕ್ಷ್ಮೇಶ್ವರ ತಾಲೂಕಿನ ಹಣೆಪಟ್ಟಿ ಹೊಂದಿದ್ದರು ಕಂದಾಯ ಇಲಾಖೆಯ ತಹಶೀಲ್ದಾರ್ ಕಚೇರಿ ಅಧಿಕಾರ ಉಪ ನೊಂದಣಿ ಕಾರ್ಯಾಲಯ ಮತ್ತು ಖಜಾನೆ ಕಾರ್ಯಾಲಯವನ್ನು ಹೊರತುಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ತಾಲೂಕ ಪಂಚಾಯಿತಿಯನ್ನು ಹೊರತುಪಡಿಸಿದರೆ ಯಾವುದೇ ಇಲಾಖೆಗಳ ಕಚೇರಿಗಳು ಅಸ್ತಿತ್ವದಲ್ಲಿಲ್ಲ.
ಹೊಸ ತಾಲೂಕುಗಳಿಗೆ ಪ್ರಮುಖವಾಗಿ ಕೃಷಿ ಇಲಾಖೆ ತೋಟಗಾರಿಕಾ ಇಲಾಖೆ ರೇಷ್ಮೆ ಇಲಾಖೆ ಲೋಕೋಪಯೋಗಿ ಇಲಾಖೆ ಆರ್ ಡಿ ಪಿ ಆರ್ ನ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಗ್ರಾಮೀಣ ನೀರು ಸರಬರಾಜು ನೈರ್ಮಲ್ಯ ಇಲಾಖೆ ರೇಷ್ಮೆ ಇಲಾಖೆ ಪ್ರಮುಖವಾಗಿ ಬರಬೇಕಾಗಿದೆ.
ಹೊಸ ತಾಲೂಕುಗಳ ರಚನೆ ಆದ ನಂತರ ಜನಸಾಮಾನ್ಯರು ಇನ್ನೇನು ಪಕ್ಕದಲ್ಲಿಯೇ ತಾಲೂಕು ಆಯಿತು ಎಂದು ಖುಷಿ ಪಟ್ಟಿದ್ದರು. ಆದರೆ ಇನ್ನೂವರೆಗೂ ಹೊಸ ತಾಲೂಕುಗಳ ಜನತೆ ಹಳೆಯ ಗಂಡನ ಪಾದವೇ ಗತಿ ಎನ್ನುವಂತೆ ಮತ್ತೆ ಶಿರಹಟ್ಟಿ ಎತ್ತ ಮುಖ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ನೂತನ ಶಾಸಕ ಚಂದ್ರು ಲಮಾಣಿಯವರು ತಾಲೂಕು ರಚನೆಯ ಮುಂಚೂಣಿಯಲ್ಲಿದ್ದ ಮಾಜಿ ಶಾಸಕರಾದ ಗಂಗಣ್ಣ ಮಹಾಂತ ಶೆಟ್ಟರ್ ಮತ್ತು ಜಿಎಸ್ ಗಡ್ಡ ದೇವರ ಮಠ ಅವರ ಮಾರ್ಗದರ್ಶನದಲ್ಲಿ ನೂತನ ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿ ಅವರೊಂದಿಗೆ ಮನವರಿಕೆ ಮಾಡಿಕೊಟ್ಟು ಹೊಸ ತಾಲೂಕಿನ ಅಗತ್ಯ ಇಲಾಖೆಯ ಕಚೇರಿಗಳನ್ನು ಆರಂಭಿಸಲು ಸರ್ಕಾರದ ಮೇಲೆ ಒತ್ತಡ ತರಬೇಕಷ್ಟೆ.