ಆಜಾದ್ ಮೇಲೆ ಗುಂಡಿನ ದಾಳಿ: ಕ್ರಮಕ್ಕೆ ಆನಂದ ಏಗನೂರು ಒತ್ತಾಯ

ರಾಯಚೂರು,ಜೂ.೨೯-
ಭೀಮ್ ಆರ್ಮಿ ಮುಖ್ಯಸ್ಥ, ದಲಿತ ಹೋರಾಟಗಾರ ಮತ್ತು ಆಜಾದ್ ಸಮಾಜ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಅವರ ಬೆಂಗಾವಲು ಪಡೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದನ್ನು ಸಾಮಾಜಿಕ ಹೋರಾಟಗಾರರ ಆನಂದ ಏಗನೂರು ಅವರು ತೀವ್ರವಾಗಿ ಖಂಡಿಸಿದರು.
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಈ ಘಟನೆ ನಡೆದಿದೆ. ಆಜಾದ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರನ್ನು ಬಂಧನ ಮಾಡಬೇಕೆಂದು ಆಗ್ರಹಿಸಿದರು. ಚಂದ್ರಶೇಖರ ಅಜಾದ್ ಅವರು ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜಾದ್ ಅವರಿಗೆ ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.