ಆಚರಣೆಯೇ ದೊಡ್ಡ ಉಪದೇಶ

ಕಲಬುರಗಿ:ಜು.30: ಜೀವನದಲ್ಲಿ ಆಚರಣೆಗಿಂತದೊಡ್ಡ ಉಪದೇಶ ಬೇರೊಂದಿಲ್ಲ ಆದರ್ಶಗಳನ್ನು ಆಚರಣೆಗೆ ತರಬೇಕು ಎಂದು ಬ್ರಹ್ಮಚಾರಿ ಮಹೇಶ್ವರ ಗುರೂಜಿ ಕಿವಿಮಾತು ಹೇಳಿದರು.

ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ರಮಾಬಾಯಿ ಜಾಗಿರದಾರ್ ಪದವಿಪೂರ್ವ ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ ಪರಿಚಯ (ಸ್ವಾಗತ) ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಲೌಖಿಕ ವಿದ್ಯ ಕಲಿಸುವವರಿಗೆ ಉಪಾಧ್ಯಾಯ ಎನ್ನುತ್ತಾರೆ. ಹತ್ತು ಉಪಾಧ್ಯಾಯರಿಗೆ ಒಬ್ಬ ಆಚಾರ್ಯ ಸಮನಾಗುತ್ತಾನೆ, ನೂರು ಜನ ಆಚಾರ್ಯರು ಒಬ್ಬ ತಂದೆಗೆ ಸಮ, ಸಾವಿರ ತಂದೆಗೆ ಒಬ್ಬ ತಾಯಿ ಸಮವಾಗುತ್ತಾಳೆ. ಅಂಥ ಪವಿತ್ರ ಸ್ಥಾನ ತಾಯಿಗಿದೆ.

ವಿದ್ಯಾರ್ಥಿ ಗಳು ತಂದೆ, ತಾಯಿ, ವೈದ್ಯರು ಹಾಗೂ ಗುರು (ಶಿಕ್ಷರ) ಬಳಿ ಸುಳ್ಳು ಹೇಳಬಾರದು. ವೈದ್ಯರ ಬಳಿ ಸುಳ್ಳು ಹೇಳಿದರೆ ರೋಗ ವಾಸಿಯಾಗುವುದಿಲ್ಲ. ತಂದೆ, ತಾಯಿ. ಶಿಕ್ಷರ ಬಳಿ ಸುಳ್ಳು ಹೇಳಿದರೆ ಜೀವನ ಹಾಳಾಗುತ್ತದೆ ಎಂದರು.

ಬದುಕನ್ನು ಗೆಲ್ಲಬೇಕಾದರೆ ಆದ್ಯಾತ್ಮಿಕ ಶಿಕ್ಷಣ ಅಗತ್ಯ. ಇಂದು ಶಿಕ್ಷಣದ ಜತೆ ಸಂಸ್ಕಾರದ ಅಗತ್ಯ ಎದ್ದು ಕಾಣುತ್ತದೆ. ಸಂಸ್ಕಾರದ ಕೊರತೆಯಿಂದಾಗಿ ಇಂದು ಜಗತ್ತಿನಲ್ಲಿ ಅಶಾಂತಿ ತಾಂಡವವಾಡುತ್ತಿದೆ ಎಂದರು.

ಶಿಕ್ಷಕರ ಮನಸ್ಸು ಗೆಲ್ಲುವವರೆ ನಿಜವಾದ ಆದರ್ಶ ವಿದ್ಯಾರ್ಥಿಗಳು. ಮಕ್ಕಳಲ್ಲಿ ಕಲಿಯುವ ಇಚ್ಛೆ ಹುಟ್ಟಿಸುವವನೇ ಆದರ್ಶ ಶಿಕ್ಷಕನಾಗುತ್ತಾನೆ. ಆರ್.ಜೆ. ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರೂ ಆಗಿರುವ ಪ್ರಾಚಾರ್ಯ ಡಾ.ಪ್ರಹ್ಲಾದ ಬುರ್ಲಿ, ಜ್ಯೋತಿ ಪ್ರಹ್ಲಾದ ಬುರ್ಲಿ ಉಪಸ್ಥಿತರಿದ್ದರು.

ನಂತರ ನೀಟ್, ಜೆ.ಇ.ಇ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.