ಆಘ್ಘಾನಿಸ್ತಾನದಲ್ಲಿ ೧೦ ಮಂದಿ ಚೀನಾ ಗೂಢಾಚಾರಿಗಳ ಬಂಧನ

ಕಾಬೂಲ್, ಡಿ.೨೫- ಕೊರೊನಾ ಸೋಂಕನ್ನು ವಿಶ್ವಕ್ಕೆ ಹರಡಿ ಜಗತ್ತಿನ ಮುಂದೆ ತಲೆತಗ್ಗಿಸಿ ನಿಂತಿರುವ ಚೀನಾಗೆ ಇದೀಗ ಮತ್ತೊಮ್ಮೆ ತಲೆತಗ್ಗಿಸುವಂತಾಗಿದೆ.

ಅಫ್ಘಾನಿಸ್ತಾನದಲ್ಲಿ ಚೀನಾದ ೧೦ ಗೂಢಚಾರಿ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದ ಚೀನಾ ತನ್ನ ಕುತಂತ್ರಿ ಬುದ್ದಿಯ ಮೂಲಕ ಅಪಘಾನಿಸ್ತಾನ ಸೇರಿದಂತೆ ಜಗತ್ತಿನ ಎದುರು ಅನಾವರಣ ಮಾಡಿ ತಲೆತಗ್ಗಿಸುವಂತೆ ಆಗಿದೆ …

ಅನುಮಾನಸ್ಪದ ಚಟುವಟಿಕೆಗಳ ಮೇಲೆ ವಶಕ್ಕೆ ಪಡೆಯಲಾದ೧೦ ಮಂದಿ ಗೂಢಚಾರಿ ಗಳನ್ನು ಮೊದಲು ಭಯೋತ್ಪಾದಕ ಸಂಘಟನೆಯ ಸದಸ್ಯರು ಇರಬಹುದು ಎಂದು ನಂಬಲಾಗಿತ್ತು ಆನಂತರ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ತಾವು ಚೀನಾ ಸರಕಾರದ ಗೂಢಚಾರಿ ಗಳು ಎನ್ನುವ ಸಂಗತಿಯನ್ನು ಹೊರಹಾಕಿದ್ದಾರೆ.

ಈ ವಿಷಯವನ್ನು ಆಶ್ರಫ್ ಗಣಿ ನೇತೃತ್ವದ ಸರ್ಕಾರ ಖಚಿತಪಡಿಸಿದ್ದು ಅಪಘಾನಿಸ್ತಾನದಲ್ಲಿ ಚೀನಾ ಗೂಢಾಚಾರಿಗಳನ್ನು ಬಿಟ್ಟಂತೆ ದೆಹಲಿಯಲ್ಲಿ ಬಿಟ್ಟಿರಬೇಕು ಎಂದು ಮಾಹಿತಿಯನ್ನು ಭಾರತಕ್ಕೆ ರವಾನಿಸಿದೆ.

ಬಂಧಿತ ೧೦ ಮಂದಿ ಗೂಢಚಾರಿ ಗಳು ಚೀನಾದ ಸರಕಾರದ ಕಡೆಯವರು ಎನ್ನುವ ಮಾಹಿತಿ ಬಹಿರಂಗಗೊಂಡಿದೆ ಎಂದು ಅಪಘಾನಿಸ್ತಾನದ ಸಚಿವಾಲಯ ಈ ವಿಷಯವನ್ನು ತಿಳಿಸಿದೆ.

ಇದೇ ಮೊದಲ ಬಾರಿಗೆ ಚೀನಾದ ಗೂಢಚಾರಿ ಗಳು ದೊಡ್ಡಮಟ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಆಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ತನ್ನ ಸೈನಿಕರನ್ನು ವಾಪಸ್ ಕರೆಸಿಕೊಂಡ ಬಳಿಕ ಅಮೆರಿಕದ ಸೇನೆಯ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಚೀನಾ ಸರ್ಕಾರ ಗೂಢಚಾರಿ ಕಾರಣವಿರಬೇಕು ಎನ್ನಲಾಗುತ್ತದೆ.

ಚೀನಾ ಸರ್ಕಾರದ ೧೦ ಮಂದಿ ಗೂಢಚಾರಿ ಗಳನ್ನು ವಶಕ್ಕೆ ಪಡೆದಿರುವ ವಿಷಯವನ್ನು ಅಲ್ಲಿನ ಅಧ್ಯಕ್ಷ ಅಶ್ರಫ್ ಗನಿ ಖಚಿತಪಡಿಸಿದ್ದಾರೆ.

ಈ ಸಂಬಂಧ ಅಫ್ಘಾನಿಸ್ತಾನದಲ್ಲಿರುವ ಚೀನಾದ ರಾಯಭಾರಿ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅಫ್ಘಾನಿಸ್ತಾನ ಸರ್ಕಾರದ ಮೂಲಗಳು ತಿಳಿಸಿವೆ.

ಚೀನಾದ ಗೂಢಚಾರಿ ಗಳು ಆಫ್ಘಾನಿಸ್ತಾನದ ಭದ್ರತಾ ಪಡೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದಂತೆ ಅಪಘಾನಿಸ್ತಾನದ ಕ್ಷಮೆಕೋರಿದೆ