ಆಗೋದೆಲ್ಲಾ ಒಳ್ಳೇದಕ್ಕೆ ಚಿತ್ರಕ್ಕೆ ಮುಹೂರ್ತ

ಗಿನ್ನಿಸ್ ದಾಖಲೆಯ ’ದರ್ಪಣ’ ಮತ್ತು ಬಿಡುಗಡೆಯಾಗಬೇಕಾದ ’ಪರಿಶುದ್ದಂ’ ಚಿತ್ರ ನಿರ್ದೇಶನ ಮಾಡಿರುವ ಆರೋನ್ ಕಾರ್ತಿಕ್ ವೆಂಕಟೇಶ್ ’ಆಗೋದೆಲ್ಲಾ ಒಳ್ಳೇದಕ್ಕೆ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.

 ಪ್ರಥಮ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ರಿಯಲ್ ಎಸ್ಟೇಟ್ ಉದ್ಯಮಿ ಸೀಗೆಹಳ್ಳಿಯ ಎ.ಎಸ್.ಲೋಹಿತ್  ಬಿನಿಶಾ ನಿರ್ಮಾಣವಿದೆ. ಪ್ರೀತಿ-ಭಯೋತ್ಪಾದನೆ-ಸರ್ಕಾರ ಮೂರರ ಸುತ್ತ ಚಿತ್ರ ಆಕ್ಷನ್ ಥ್ರಿಲ್ಲರ್ ರೂಪದಲ್ಲಿ ಸಾಗುತ್ತದೆ.

ತಾರಗಣದಲ್ಲಿ ಎಂ.ಡಿ.ಕೌಶಿಕ್, ಯತಿರಾಜ್, ಸಂದೀಪ್‌ಮಲಾನಿ, ದುಬೈರಫೀಕ್, ಮಠಕೊಪ್ಲ, ಪವಾನಿರಾಜು, ಭಾರ್ಗವ್, ಅರ್ಚನಾ, ಕಿರಣ್, ಆಮನ್, ತೇಜಸ್ವಿನಿ, ಜೀವ, ಸೈಯದ್‌ಜೋಹಾನ್, ಮಾಸ್ಟರ್ ಸುಮಿತ್, ಸುಹೈಲ್ ಮುಂತಾದವರು ನಟಿಸುತ್ತಿದ್ದಾರೆ. ಬೆಂಗಳೂರು, ಕಾರವಾರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಛಾಯಾಗ್ರಹಣ ಸಂಗಮೇಶ್, ಸಂಕಲನ ಆಯೂರ್‌ಸ್ವಾಮಿ, ಸಾಹಸ ಜಾನಿಮಾಸ್ಟರ್ ಅವರದಾಗಿದೆ.