ಆಗೋದೆಲ್ಲಾ ಒಳ್ಳೆಯದಕ್ಕೆ ಟ್ರೈಲರ್  ಬಿಡುಗಡೆ

ಆಗೊದೆಲ್ಲಾ ಒಳ್ಳೆಯದಕ್ಕೆ ಚಿತ್ರದ ಟ್ರೈಲರ್ ಮತ್ತು ಹಾಡು ಬಿಡುಗಡೆಯಾಗಿದೆ. ಆರೂನ್ ಕಾರ್ತಿಕ್ ವೆಂಕಟೇಶ್ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು. ಚಿತ್ರಕ್ಕೆ ಲೋಹಿತ್ ಬಂಡವಾಳ ಹಾಕಿದ್ದಾರೆ.

ಈ ವೇಳೆ ಮಾತಿಗಳಿದ ನಿರ್ದೇಶಕ ಕಾರ್ತಿಕ್ ವೆಂಕಟೇಶ್, ಉಗ್ರವಾದ ಬುಡಸಮೇತ ತೆಗೆದುಹಾಕಲು ಮುಂದಾಗುವ ಗೃಹ ಸಚಿವರ  ಹೈಜಾಕ್ ಮಾಡ್ತಾರೆ.

13 ದಿನ ಚಿತ್ರೀಕರಣ ಮಾಡಲಾಗಿದೆ.4 ಹಾಡು ಗಳಿವೆ. ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದ್ದು ಯು/ಎ ಸಿಕ್ಕಿದೆ, ಎಂದರು.

ಹಿರಿಯ ಕಲಾವಿದ  ಎಂ.ಡಿ ಕೌಶಿಕ್, ಗೃಹ ಸಚಿವರ ಪಾತ್ರ ಮಾಡಿದ್ದೇನೆ .ಕಡಿಮೆ‌‌ಬಜೆಟ್ ನಲ್ಲಿ ಚಿತ್ರ ತಯಾರಾಗಿದೆ ಎಂದರೆ‌ ನಟ ಯತಿರಾಜ್ ಪೊಲೀಸ್ ಆಯುಕ್ತ ಪಾತ್ರ ನನ್ನದು ಎಂದರು.

ನಟ ಭಾಗರ್ವ ,ನಾಯಕಿ ಒಳ್ಳೆಯ ಪಾತ್ರ ಸಿಕ್ಕಿದೆ ಸಹಕಾರವಿರಲಿ‌ ಎಂದು ಹೇಳಿದರು. ಸಂದೀಪ್ ಮಲಾನಿ, ದುಬೈ ರಫೀಕ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು