ಆಗಸ್ಟ್-15ರ ಪ್ರಯುಕ್ತ ವಿದಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಸ್ಲೇಟ್‍ಗಳ ವಿತರಣೆ ”


ಸಂಜೆವಾಣಿ ವಾರ್ತೆ
ಸಿರಿಗೇರಿ ಆ.17, ನಿನ್ನೆ ನಡೆದ 77ನೇ ಸ್ವತಂತ್ರ ದಿನಾಚರಣೆ ಅಂಗವಾಗಿ ಸ್ಥಳೀಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪ್ರೇಮಿ ಬಿ.ಅನ್ವರ್‍ಸಾಬ್ ಎಂಬುವವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಸ್ಲೇಟ್‍ಗಳನ್ನು ವಿತರಿಸಿದರು. 1ನೇ ತರಗತಿಯ 25 ವಿದ್ಯಾರ್ಥಿಗಳಿಗೆ ಸ್ಲೇಟ್‍ಗಳನ್ನು, 2ನೇ ತರಗತಿಯಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ 310 ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಿದರು. ಈವೇಳೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರಿ ಶಾಲೆಗಳಲ್ಲಿ ಬಡವಿದ್ಯಾರ್ಥಿಗಳೇ ಹೆಚ್ಚಾಗಿ ಓದುತ್ತಿರುತ್ತಾರೆ. ಬಡತನದಲ್ಲಿದ್ದರೂ ಒಳ್ಳೆಯ ಪ್ರತಿಭಾವಂತರಾಗಿರುತ್ತಾರೆ. ಅವರಿಗೆ ಪ್ರೋತ್ಸಾಹ ನೀಡಬೇಕೆಂದು ಪುಸ್ತಕ ವಿತರಣೆ ಮಾಡಿದ್ದೇನೆ. ಮತ್ತು ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಅವರ ತಂದೆ ತಾಯಿಗಳು ಒಂದುಸಲ ಪೆನ್ಸಿಲ್ ಪೆನ್ನು ಪುಸ್ತಕ ಕೊಡಿಸಿದರೆ ಅವುಗಳನ್ನು ಸರಿಯಾಗಿ ಉಪಯೋಗಿಸದೇ ಕಳೆದುಕೊಳ್ಳುವುದು, ಹರಿದುಕೊಳ್ಳುವುದು, ಮುರಿದುಕೊಳ್ಳುವುದು ಮಾಡುತ್ತಾರೆ. ಪುಸ್ತಕ ಪೆನ್ನು ಪೆನ್ಸಿಲ್ ಇಲ್ಲ ಎಂದು ನೆಪ ಹೇಳಿ ಶಾಲೆ ತಪ್ಪಿಸುತ್ತಾರೆ ಅದಕ್ಕೆ ಅವರಿಗೆ ಸ್ಲೇಟ್ ಮತ್ತು ಬಳಪಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಇದೇವೇಳೆ ಕೃಷ್ಣಶೆಟ್ಟಿ ಎನ್ನುವವರು 50ವಿದಾರ್ಥಿಗಳಿಗೆ ಪೆನ್ನು,ಪೆನ್ಸಿಲ್ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಚಾಕ್ಲೆಟ್ ವಿತರಿಸಿದರು. ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಬಿ.ಹನುಮಂತ, ಮುಖ್ಯಗುರು ಸತೀಶ್‍ಕುಮಾರ್, ಸಹ ಶಿಕ್ಷಕರು ಇವರ ಸಹಾಯಕ್ಕೆ ಧನ್ಯವಾದಗಳನ್ನು ತಿಳಿಸಿ ಸನ್ಮಾನಿಸಿ ಗೌರವಿಸಿದರು. ಗ್ರಾಮದ ಟಿ.ಎಚ್.ಸುಭಾನಿ, ಹಾವಿನಾಳ್‍ಮೌಲಪ್ಪ, ತಿಪ್ಪೇಸ್ವಾಮಿ, ಕೆ.ವೀರೇಶ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

One attachment • Scanned by Gmail