ಆಗಸ್ಟ್ ೩ ರಂದು ಸಿದ್ಧರಾಮೋತ್ಸವ

ರಾಯಚೂರು.ಜು.೨೦- ಮುಂದಿನ ತಿಂಗಳು ಆಗಸ್ಟ್ ೩ ರಂದು ಸಿದ್ಧರಾಮಯ್ಯ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದರಿಂದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.
ಈ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ವೀಕ್ಷಕರು ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳಾದ ಶರಣುಕುಮಾರ ಮೋದಿ ಅವರು ಮಾತನಾಡಿ, ರಾಜ್ಯದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜನ್ಮ ದಿನಾಚರಣೆಯನ್ನು ದಾವಣಗೆರೆಯಲ್ಲಿ ಅಭಿಮಾನಿಗಳು ಆಚರಿಸುತ್ತಿರುವುದು ಸಂತೋಷದ ಸಂಗತಿ.
ಹೀಗಾಗಿ ನಾವೆಲ್ಲರೂ ನಮ್ಮ ನಾಯಕರ ಜನ್ಮದಿನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ಪಾಲ್ಗೊಳ್ಳುವುದು ಅವಶ್ಯವಾಗಿದೆ. ಹೀಗಾಗಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಹೇಳಿದರು. ನಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ.ವಿ.ನಾಯಕ ಅವರು ಮಾತನಾಡಿ, ಜಿಲ್ಲೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಶರಣಪ್ಪ ಮಟ್ಟೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಮುಖಂಡರುಗಳಾದ ಜಯಣ್ಣ, ಕೆ.ಶಾಂತಪ್ಪ, ಜಿ.ಬಸವರಾಜರೆಡ್ಡಿ, ಜಯವಂತರಾವ ಪತಂಗೆ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಜಿ.ಶಿವಮೂರ್ತಿ, ಅಬ್ದುಲ್ ಕರೀಂ, ಆಂಜನೇಯ ಕುರುಬದೊಡ್ಡಿ, ಅಸ್ಲಂ ಪಾಷಾ, ಅರುಣ ದೋತರಬಂಡಿ, ನಾಗೇಂದ್ರಪ್ಪ, ನರಸಿಂಹ ನಾಯಕ, ರಾಮಕೃಷ್ಣ ನಾಯಕ, ಶಂಕರ ಕಲ್ಲೂರು, ಜಾಹೀದ್ ಹುಸೇನ್, ಸಿದ್ಧಪ್ಪ ಭಂಡಾರಿ, ಕಡಗೋಳ ಶರಣಪ್ಪ, ಹರಿಬಾಬು, ಜಿ.ತಿಮ್ಮಾರೆಡ್ಡಿ, ಪಾಗುಂಟಪ್ಪ ಮಿರ್ಜಾಪೂರು, ಸಂದೀಪ ನಾಯಕ, ಚೇತನಕುಮಾರ ಕಡಗೋಳ, ಇಲ್ಲೂರು ಗೋಪಾಲಯ್ಯ, ಆಂಜನೇಯ ಕೊಂಬಿನ, ಬಸವರಾಜ ವಕೀಲ, ರಾಮನಗೌಡ ಮರ್ಚಟಾಳ, ಹನುಮಂತು ಜೂಕೂರು, ಶಿವಶರಣಗೌಡ, ಮರಿಸ್ವಾಮಿ, ಅಂಜಿನಕುಮಾರ, ತಿಮ್ಮಪ್ಪ, ಕೆ.ಇ.ಕುಮಾರ, ಮಲ್ಲೇಶ ಕೊಲಮಿ, ಎಂ.ಡಿ.ರಿಯಾಜ್, ನಲ್ಲಾರೆಡ್ಡಿ ನಾಯಕ, ವೀರೇಶ ಗಾಣಧಾಳ, ಪ್ರಾಣೇಶ, ಅಂಜಿ, ನಿರ್ಮಲಾ ಬೆಣ್ಣಿ, ಪ್ರತಿಭಾ ರೆಡ್ಡಿ, ಮಾಲಾ ಭಜಂತ್ರಿ, ಹನುಮಂತು ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.