ಆಗಸ್ಟ್ ನಲ್ಲಿ  ಯಶೋದಾ

ನಟಿ ಸಮಂತ ರೂತ್ ಪ್ರಭು ನಟನೆಯ “ಯಶೋದ” ಚಿತ್ರ ಆಗಸ್ಟ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ವಿಡಿಯೋ ತುಣುಕು ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸುವಂತೆ ಮಾಡಿದೆ.

ಹರಿ ಮತ್ತು ಹರೀಶ್‌ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ. ಚಿತ್ರದ ಬಗ್ಗೆ ಎಲ್ಲಿಯೂ ಕಾಂಪ್ರಮೈಸ್‌ ಆಗದೇ, ಎಲ್ಲೆಡೆ ಸಲ್ಲುವ ಸಿನಿಮಾ ಮಾಡಿದ್ದೇವೆ. ಈ ಸಿನಿಮಾದಲ್ಲಿನ ಸಮಂತಾ  ಡೆಡಿಕೇಷನ್‌ ತೆರೆಮೇಲೆ ಕಾಣಿಸಲಿದೆ.  ನಟನೆಯನ್ನು ನೋಡುವುದೇ ಚಂದʼ ಎನ್ನುತ್ತಾರೆ ನಿರ್ಮಾಪಕರು.

 ಚಿತ್ರದ ಚಿತ್ರೀಕರಣ. ಶೇ. ೮೦ ಭಾಗದ ಮುಕ್ತಾಯವಾಗಿದ್ದು, ಹೈದರಾಬಾದ್‌ನಲ್ಲಿ ಕೊನೇ ಹಂತದ ನಡೆಯುತ್ತಿದೆ. ಜೂನ್‌ ೧ಕ್ಕೆ ಚಿತ್ರೀಕರಣ ಮುಗಿಸಿ ಆಗಸ್ಟ್ ನಲ್ಲಿ ತೆರೆಗೆ ತರುವ ಉದ್ದೇಶವಿದೆ ಎಂದಿದ್ದಾರೆ.

ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.ಚಿತ್ರದಲ್ಲಿ ಸ್ಟಾರ್‌ ನಟರ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್‌, ಉನ್ನಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಸೇರಿ ಹಲವರಿದ್ದಾರೆ.