ಆಗಷ್ಟ್ 1 ರಿಂದ ಹಾಲಿನ ಧರ 3 ರೂ ಹೆಚ್ಚಳ: ಭೀಮಾನಾಯ್ಕ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.25: ರಾಜ್ಯದಲ್ಲಿ ಬರುವ ಆಗಷ್ಟ್ 1 ರಿಂದ ಹಾಲಿನ‌ ಮಾರಾಟ ಧರವನ್ನು ಕೆಎಂಎಪ್  ಪ್ರತಿ‌ಲೀಟರ್ ಗೆ 3 ರೂ ಹೆಚ್ಚಿಸಲಿದ್ದು. ಆ ಹಣವನ್ನು ನೇರವಾಗಿ ಹಾಲು ಉತ್ಪಾದನೆಯ ರೈತರಿಗೆ ನೀಡಲಿದೆ ಎಂದು  ಕೆಎಂಎಫ್  ರಾಜ್ಯ ಅಧ್ಯಕ್ಷ ಭೀಮಾನಾಯ್ಕ ಹೇಳಿದ್ದಾರೆ.
ನಗರದ ರಾಬವಿಕೋ ಹಾಲು ಉತ್ಪಾದನಾ ಘಟಕದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು.
ದಿನೇ ದಿನೇ ಹಾಲಿನ ಉತ್ಪಾದನೆ ಕುಸಿಯುತ್ತಿದೆ.  ಒಕ್ಕೂಟಕ್ಕೆ ಬರುವ ಹಾಲು 12 ಲಕ್ಷ ಲೀಟರ್ ಕಡಿಮೆ ಆಗಿದೆ.
ಹಸುಗಳ ಆಹಾರದ ವೆಚ್ಚ ಹೆಚ್ಚಳ ಮೊದಲಾದ ಕಾರಣದಿಂದ ಎಂದ ಅವರು, ಅಲ್ಲದೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ  ರೈತರಿಗೆ ನೀಡುವ ಹಣ ಕಡಿಮೆ ಇದೆ. ಅದಕ್ಕಾಗಿ ರೈತರಿಗೆ ಹಾಲು ಉತ್ಪಾದನೆ ಲಾಭದಾಯಕವಲ್ಲದಾಗಿದೆ.
ನೆರೆಯ ಆಂದ್ರ, ಕೇರಳ, ತಮಿಳುನಾಡು ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನಮಗಿಂತ ಹೆಚ್ಚಿನ ಧರದಲ್ಲಿ ಮಾರಾಟ ಮಾಡುತ್ತಿದೆ. ಹಾಗಾಗಿ ಐದು ರೂ ಹೆಚ್ಚಿಸಲು ಕೋರಿತ್ತು. ಆದರೆ ಸಿಎಂ ಅವರು ಮೂರು ರೂ ಗ್ರಾಹಕರಿಗೆ  ಹೆಚ್ಚಿಸಲು  ಒಪ್ಪಿದ್ದಾರೆ. ಆ ಹಣವನ್ನು ರೈತರಿಗೆ ನೀಡಲಿದೆಂದರು.
ವಾಸ್ತವದಲ್ಲಿ ಒಕ್ಕೂಟಕ್ಕೆ 1.20 ಕೋಟಿ ಲೀಟರ್ ಹಾಲಿನ ಬೇಡಿಕೆ ಇದೆ. ಬೆಲೆ ಹೆಚ್ಚಳದಿಂದ  ಹಾಲಿನ ಉತ್ಪಾದನೆ ಹೆಚ್ಚುವ ಸಾಧ್ಯತೆ ಇದೆಂದರು.
ಸರ್ಕಾರ ಐದು ರೂ ಪ್ರೋತ್ಸಾಹ ಧನ ನೀಡುತ್ತಿದೆ ಎಂದ ಅವರು ನಮ್ಮ ಕೆಎಂಎಫ್ ಹಾಲಿಗೆ ಇತರ ರಾಜ್ಯಗಳಲ್ಲೂ ಬೇಡಿಕೆ ಇದೆ. ರಸಾಯನಿಕ‌ ರಹಿತ ಉತ್ಪಾದನೆಯಾಗಿದೆ. ದುಬೈನಲ್ಲಿಯೂ ನಂದಿನಿ  ಉತ್ಪನ್ನಗಳು ಮಾರಾಟ ಮಾಡುತ್ತಿದೆ.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ತಿರುಪತೆಪ್ಪ, ನಿರ್ದೇಶಕರುಗಳಾದ ಎಂ. ಸತ್ಯನಾರಾಯಣ, ಶಿವಪ್ಪ ವಾದಿ, ಯಂಕನಗೌಡ, ಹೆಚ್.ಮರುಳ ಸಿದ್ದಪ್ಪ, ಭೀಮನಗೌಡ,  ನಾಗಮಣಿ, ಜಿಂಕಾಲ್, ಶ್ರೀಕಾಂತಪ್ಪ ಮೊದಲಾದವರು ಇದ್ದರು.

One attachment • Scanned by Gmail