ಆಕ್ಸ್ ಫರ್ಡ್ ವಿವಿ ಚರ್ಚಾ ಆಹ್ವಾನ ನಿರಾಕರಿಸಿದ ವರುಣ್


ನವದೆಹಲಿ,ಮಾ.೧೭- ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂದಿ ಹೇಳಿಕೆ ವಿವಾದವಾಗಿ ಮಾರ್ಪಟ್ಟಿರುವ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ “ಸರಿಯಾದ ಹಾದಿಯಲ್ಲಿದೆ” ಎನ್ನುವ ಕುರಿತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಚರ್ಚೆಯಲ್ಲಿ ಭಾಗವಹಿಸುವ ಆಹ್ವಾನವನ್ನು ಬಿಜೆಪಿ ಸಂಸದ ವರಣ್ ಗಾಂಧಿ ನಿರಾಕರಿಸಿದ್ದಾರೆ.

ಅಂತರರಾಷ್ಟ್ರೀಯ ವೇದಿಕೆಯಲ್ಲಿ ಆಂತರಿಕ ಸವಾಲುಗಳನು ಪ್ರತಿನಿಧಿಸುವಲ್ಲಿ ಯಾವುದೇ ಅರ್ಹತೆ ಅಥವಾ ಸಮಗ್ರತೆ ಕಾಣುವುದಿಲ್ಲ” ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

“ಆಯ್ಕೆ ಮಾಡಿದ ವಿಷಯ ಚರ್ಚೆ ಅಥವಾ ವಿವಾದಕ್ಕೆ ಹೆಚ್ಚಿನ ಅವಕಾಶ ನೀಡುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಸೋದರಸಂಬಂಧಿ ರಾಹುಲ್ ಗಾಂಧಿ ಅವರ ಮೇಲೆ ಕೇಂಬ್ರಿಡ್ಜ್‌ನಲ್ಲಿ ಭಾರತೀಯ ಪ್ರಜಾಪ್ರಭುತ್ವದ ಕುರಿತು ಮಾಡಿದ ಟೀಕೆಗಳ ಬಗ್ಗೆ ಬಿಜೆಪಿಯ ತೀವ್ರ ದಾಳಿಯ ನಡುವೆ ವರುಣ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ.

ದೇಶ “ಅಭಿವೃದ್ಧಿ ಮತ್ತು ಒಳಗೊಳ್ಳುವಿಕೆಗಾಗಿ ಸರಿಯಾದ ಹಾದಿಯಲ್ಲಿದೆ” .ಇದನ್ನು “ಸ್ವಾತಂತ್ರ್ಯದ ನಂತರ ಕಳೆದ ೭ ದಶಕಗಳಲ್ಲಿ ವಿವಿಧ ರಾಜಕೀಯ ಸಂಬಂಧಗಳ ಸರ್ಕಾರಗಳು” ರೂಪಿಸಿವೆ ಎಂದು ಹೇಳಿದ್ದಾರೆ.

ಚುನಾಯಿತ ಪ್ರತಿನಿಧಿಯಾಗಿ, ನೀತಿ ಉಪಕ್ರಮಗಳ ಅಧ್ಯಯನ ಮಾಡುವುದು ಮತ್ತು ಮೌಲ್ಯಮಾಪನ ಮಾಡುವುದು ಮತ್ತು “ಸಂಸತ್ತಿನ ಒಳಗೆ ಮತ್ತು ಇತರ ವೇದಿಕೆಗಳ ಮೂಲಕ” ಪ್ರತಿಕ್ರಿಯೆ ನೀಡುವುದು ಅವರ ಕೆಲಸ ಎಂದು ಅವರು ಹೇಳಿದರು.

.ಕಾಂಗ್ರೆಸ್ ನಾಯಕ “ಭಾರತ ವಿರೋಧಿ ಶಕ್ತಿಗಳು” ಮತ್ತು “ಗ್ಯಾಂಗ್” ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ಆರೋಪಿಸಿದ್ಧರು.

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಲ್ಲಿ ಆಗಾಗ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದನ್ನು ಎತ್ತಿ ಹಿಡಿದಿರುವ ಕಾಂಗ್ರೆಸ್, ಈ ವಿಷಯದಲ್ಲಿ ರಾಹುಲ್ ಗಾಂಧಿ ಕ್ಷಮೆಯಾಚನೆಯನ್ನು ತಳ್ಳಿಹಾಕಿದೆ.

ಯಾವುದೇ ತಪ್ಪು ಮಾಡಿಲ್ಲ ಎಂದು ನಿರಾಕರಿಸಿದ ರಾಹುಲ್ ಗಾಂಧಿ, ಬಿಜೆಪಿಯ ಆರೋಪಗಳಿಗೆ ಸಂಸತ್ತಿನಲ್ಲಿ ಪ್ರತಿಕ್ರಿಯಿಸಲು ಅವಕಾಶ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.