ಆಕ್ಸ್ ಫರ್ಡ್ ನ ಕೋವಿಡ್ ಲಸಿಕೆ: ಮೂರನೇ ಹಂತದ ವೈದ್ಯಕೀಯ ಪ್ರಯೋಗ


ನವದೆಹಲಿ, ಸೆ 20- ಪುಣೆಯ ಸೀರಮ್ ಇನ್ ಸ್ಟಿಟ್ಯೂಟ್ ನಿಂದ ಭಾರತದಲ್ಲಿ ತಯಾರಿಸಲ್ಪಟ್ಟ ಆಕ್ಸ್ ಫರ್ಡ್ ನ ಕೋವಿಡ್ ಲಸಿಕೆಗೆ ಸಂಬಂಧಪಟ್ಟಂತೆ ಅಭ್ಯರ್ಥಿಯ ಮೂರನೇ ಹಂತದ ಮಾನವ ವೈದ್ಯಕೀಯ ಪ್ರಯೋಗ ಮುಂದಿನ ವಾರ ಪ್ರಾರಂಭವಾಗಲಿದೆ ‘
ಮೂರನೇ ಹಂತದ ‘ಕೋವಿಶೀಲ್ಡ್’ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ಸಾಸೂನ್ ಆಸ್ಪತ್ರೆಯಲ್ಲಿ ನಾಳೆಯಿಂದ ಆರಂಭವಾಗುವ ಸಾಧ್ಯತೆ ಇದೆ. ಈಗಾಗಲೇ ಕೆಲವು ಸ್ವಯಂ ಸೇವಕರು ಈ ಪ್ರಯೋಗಕ್ಕೆ ಮುಂದೆ ಬಂದಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸಾಸೂನ್ ಜನರಲ್ ಆಸ್ಪತ್ರೆಯ ಡೀನ್ ಡಾ.ಮುರಳೀಧರ್ ತಿಳಿಸಿದ್ದಾರೆ.

‘ಶನಿವಾರದಿಂದಲೇ ಆಸ್ಪತ್ರೆ ಸ್ವಯಂ ಸೇವಕರನ್ನು ಪರೀಕ್ಷೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.