ಆಕ್ಸ್‌ಫರ್ಡ್ ಲಸಿಕೆ : ತುರ್ತು ಬಳಕೆಗೆ ಮುಂದಿನವಾರ ಅನುಮತಿ


ನವದೆಹಲಿ, ಡಿ.೨೭- ಕೊರೊನೊ ಸೋಂಕಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾ ಲಯ ಅಭಿವೃದ್ಧಿಪಡಿಸಿರುವ ಲಸಿಕೆಗೆ ಭಾರತದಲ್ಲಿ ಮುಂದಿನವಾರ ತುರ್ತು ಬಳಕೆಗೆ ಅನುಮತಿ ನೀಡುವ ನಿರೀಕ್ಷೆ ಇದೆ. ಲಸಿಕೆಗೆ ಅನುಮತಿ ಸಿಕ್ಕರೆ ತುರ್ತು ಬಳಕೆಗೆ ಅನುಮತಿ ಪಡೆದ ದೇಶದ ಮೊದಲ ಲಸಿಕೆ ಇದಾಗಲಿದೆಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಲಸಿಕೆಗೆ ದೇಶದಲ್ಲಿ ಮುಂದಿನವಾರ ತುರ್ತುಬಳಕೆಗೆ ಅನುಮತಿ ನೀಡುವ ಸಾಧ್ಯತೆಗಳಿದ್ದು ಜನವರಿ ಆರಂಭ
ದಿಂದ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಝೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಪುಣೆಯಲ್ಲಿರುವ ಭಾರತೀಯ ಸೆರಂ ಸಂಸ್ಥೆ ಉತ್ಪಾದಿಸುತ್ತಿದೆ. ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಭಾರತೀಯ ಔಷಧ ಮಹಾ ನಿಯಂತ್ರಣಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಹೈದರಾಬಾದ್ ಮೂಲದ ಭಾರತಿ ಸಂಸ್ಥೆ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆಗೆ ಅನುಮತಿ ನೀಡದಂತೆ ಮನವಿ ಮಾಡಲಾಗಿದೆ.
ಸದ್ಯ ತುರ್ತು ಬಳಕೆಗೆ ಅರ್ಜಿ ಸಲ್ಲಿಸಿರುವ ಪೈಕಿ ಆಕ್ಸ್ ಫರ್ಡ್ ಲಸಿಕೆಗೆ ಅನುಮತಿ ನೀಡಲು ಭಾರತೀಯ ಔಷಧ ನಿಯಂತ್ರಣಾ ಉದ್ದೇಶಿಸಿದ್ದು ದೇಶದಲ್ಲಿ ಮೊದಲ ಲಸಿಕೆ ಇದಾಗಲಿದೆ.ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಲಸಿಕೆಯ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಈಗಾಗಲೇ ತಜ್ಞರ ಸಮಿತಿ ಪರಿಶೀಲನೆ ನಡೆಸಿದ್ದು ಎಲ್ಲ ಅಂದುಕೊಂಡಂತೆ ಆದರೆ ಇದು ಬಳಕೆಗೆ ಮುಂದಿನವಾರ ಅನುಮತಿ ನೀಡುವ ಸಾಧ್ಯತೆಗಳು ಹೆಚ್ಚಿವೆ.
ಭಾರತ್ ಬಯೋಟೆಕ್ ಸಂಸ್ಥೆದೇಶೀಯವಾಗಿ ಅಭಿವೃದ್ಧಿಪಡಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಗತಿ ದೇಶದಲ್ಲಿ ನಡೆದಿದೆ ಹೀಗಾಗಿ ಅದರ ಗುಣಮಟ್ಟ ಪರಿಶೀಲಿಸಿದ ಬಳಿಕವೇ ತುರ್ತು ಬಳಕೆಗೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ.
ಸದ್ಯ ಆಕ್ಸ್ ಫರ್ಡ್ ವಿಶ್ವವಿದ್ಯಾ ಲಯದ ಲಸಿಕೆಗೆ ಮುಂದಿನವಾರ ಭಾರತೀಯ ಔಷಧ ನಿಯಂತ್ರಣಾ ಮಹಾನಿರ್ದೇಶಕರು ಅನುಮತಿ ನೀಡುವ ಸಾಧ್ಯತೆಗಳು ದಟ್ಟವಾಗಿದೆ.
ಭಾರತೀಯ ಸೆರಂ ಸಂಸ್ಥೆ ಈಗಾಗಲೇ ೪೦ ದಶಲಕ್ಷ ಡೋಸ್ ಲಸಿಕೆಯನ್ನ ಅಭಿವೃದ್ಧಿಪಡಿಸಿದೆ. ಭಾರತೀಯ ಔಷಧ ಮಹಾ ನಿರ್ದೇಶನಾಲಯ ತುರ್ತು ಬಳಕೆಗೆ ಅನುಮತಿ ನೀಡುತ್ತಿದ್ದಂತೆ ಈಪ್ರಮಾಣವನ್ನು ಮತ್ತಷ್ಟು ಹೆಚ್ಚು ಮಾಡಲು ಉದ್ದೇಶಿಸಲಾಗಿದೆ.