ಆಕ್ಸಿಜನ ಕೊರತೆಯಾಗದಂತೆ ಪೂರೈಸಲು ಕ್ರಮ: ಬಳ್ಳಾರಿ

ಬ್ಯಾಡಗಿ,ಮೇ19: ತಾಲೂಕಿನಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಷಿಜನ್ ಕೊರತೆಯಾಗದಂತೆ, ಶೀಘ್ರ ಆಕ್ಸಿಜನ್ ಪೂರೈಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಪಟ್ಟಣದ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ತಾವೂ ಸಹ ಬ್ಯಾಡಗಿ ಪಟ್ಟಣದ ಕೋವಿಡ್ ಆಸ್ಪತ್ರೆಗೆ ದಿನಕ್ಕೆರಡು ಬಾರಿ ಭೇಟಿ ನೀಡುತ್ತಿರುವೆ. ಅಲ್ಲಿನ ವೈದ್ಯರೊಂದಿಗೆ ಸಮಸ್ಯೆಯನ್ನು ಕುರಿತು ಮಾಹಿತಿಯನ್ನು ಪಡೆದುಕೊಂಡು ಆಕ್ಸಿಜನ್ ಪೂರೈಕೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹುಬ್ಬಳ್ಳಿ ದಾವಣಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಆಕ್ಸಿಜನ್ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತಿರುವೆ. ಈಗಾಗಲೇ ಕೋವಿಡ್ ಸೊಂಕೀತರಿಗೆ ಅತ್ಯಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್‍ಗಳನ್ನು ಪೂರೈಕೆಗೆ ಕ್ರಮ ವಹಿಸಿರುವುದು ವಿನಾಕಾರಣ ಆರೋಪಗಳನ್ನು ಮಾಡುತ್ತಿರುವ ಜನರಿಗೆ ಕಾಣುತ್ತಿಲ್ಲವೇ…? ಎಂದು ಪ್ರಶ್ನಿಸಿದ್ದು, ಇಂತಹ ಸಂದರ್ಭದಲ್ಲಿ ಅನಗತ್ಯ ರಾಜಕೀಯ ಮಾಡುವುದನ್ನು ಬಿಟ್ಟು ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸಲು ಮುಂದಾಗಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪುಟ್ಟರಾಜ, ಡಾ.ಶ್ರೀನಿವಾಸ, ಡಾ.ನಾಗರಾಜ, ಡಾ.ವೀರೇಶ ಹೊಸಮನಿ, ಬಿಜೆಪಿ ಮುಖಂಡರಾದ ಸುರೇಶ ಯತ್ನಳ್ಳಿ, ಸುರೇಶ ಆಸಾದಿ, ಶಿವಯೋಗಿ ಶಿರೂರ, ಬಸವರಾಜ ಹಾವನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.