ಆಕ್ಸಿಜನ ಉತ್ಪಾಧನೆ ಘಟಕ ಕಟ್ಟಡ ನಿರ್ಮಾಣಕ್ಕೆ ಚಾಲನೆ


ಬೆಳಗಾವಿ,ಮೇ.21: ರಾಜ್ಯದ ಎರಡನೆ ರಾಜಧಾನಿ ಬೆಳಗಾವಿಯಲ್ಲಿ ಆಕ್ಸಿಜನ್ ಅಭಾವ ಉಂಟಾಗುತ್ತಿದ್ದೆ. ನಗರದ ಬಿಮ್ಸ್ ಆಸ್ಪತ್ರೆಗೆ ಅಂತ ಬರುವ ಸೋಂಕಿತರಿಗೆ ಸರಿಯಾದ ಆಕ್ಸಿಜನ್ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣ ಆಗುತ್ತಿದೆ ಈ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರ ಶಾಸಕ ಅನಿಲ ಬೆನಕೆ ಅವರು, 1500 ವಿಎಸ್‍ಎ ಸಾಮಥ್ರ್ಯದ ಆಕ್ಸಿಜನ್ ಉತ್ಪಾದನೆ ಘಟಕದ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಇಂದು ಬೆಳಗಾವಿ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ 1500 ವಿಎಸ್‍ಎ ಸಾಮಥ್ರ್ಯದ 2.85 ಕೋಟಿ ರೂ. ವೆಚ್ಚದ ಆಕ್ಸಿಜನ್ ಉತ್ಪಾದನೆ ಘಟಕಕ್ಕೆ ಚಾಲನೆ ನೀಡಲಾಯಿತು.
ಇದಕ್ಕಾಗಿ ಬಿಮ್ಸ್ ಆವರಣದಲ್ಲಿ 39.28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಬಿಮ್ಸ್ ಅಧಿಕಾರಿಗಳು ಸೇರಿ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಗುರುವಾರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಆಕ್ಸಿಜನ್ ಘಟಕ್ಕೆ ಚಾಲನೆ ನೀಡಿ ಮಾತಬಾಡಿದ ಶಾಸಕ ಅನಿಲ ಬೆನಕೆ ಅವರು, ಕೋವಿಡ್ ತುರ್ತು ಸ್ಥಿತಿಯಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿ ಬೆಳಗಾವಿಯಲ್ಲಿ ಬರಬಾರದು ಎಂಬ ಉದ್ದೇಶದಿಂದ ಆಕ್ಸಿಜನ್ ಉತ್ಪಾದನೆ ಘಟಕ ಆರಂಭಿಸಲಾಗುತ್ತಿದೆ. 2.85 ಕೋಟಿ ರೂ. ವೆಚ್ಚದಲ್ಲಿ ಬಿಮ್ಸ್ ಆವರಣದಲ್ಲಿ ಆಕ್ಸಿಜನ ಉತ್ಪಾದನೆ ಘಟಕ ತಲೆ ಎತ್ತಲಿದ್ದು, ಇದಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಅವರು ತಿಳಿಸಿದರು