ಆಕ್ಸಿಜನ್ ಹೈಪ್ಲೋ ಯಂತ್ರ ಕಿಮ್ಸ್‍ಗೆ ಹಸ್ತಾಂತರ


ಹುಬ್ಬಳ್ಳಿ ಮೇ 21 : ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮುಖ್ಯ ನಿರ್ವಹಣಾಧಿಕಾರಿ ಮತ್ತು ಪ್ರಾದೇಶಿಕ ನಿರ್ದೇಶಕರ ಶಿಫಾರಸ್ಸಿನಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿ ಡಾ. ವೀರೇಂದ್ರ ಹೆಗ್ಗಡೆಯವರ ವತಿಯಿಂದ ಮಂಜೂರು ಮಾಡಿದ ಆಕ್ಸಿಜನ್ ಹೈ ಫೆÇ್ಲೀ ಯಂತ್ರವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಚಿವರಾದ ಜಗದೀಶ ಶೆಟ್ಟರ್ ಅವರ ಮೂಲಕ ಹಸ್ತಾಂತರಿಸಲಾಯಿತು.
ಕಿಮ್ಸ್ ಆಸ್ಪತ್ರೆಗೆ 8 ಆಕ್ಸಿಜನ್ ಕಾನ್ಸಸ್ಟ್ರೇಟರ್ ? 3 ವೆಂಟಿಲೇಟರ್ ? 3 ಹೈ ಪೆÇ್ಲೀ ಯಂತ್ರದ ಬೇಡಿಕೆ ನೀಡಿದ್ದು, ಇಂದು ಹೈಪೆÇ್ಲೀ ಯಂತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈದ್ಶಕೀಯ ಅಧೀಕ್ಷಕರಾದ ಡಾ|.ಅರುಣ್ ಕುಮಾರ್ ? ಜಿಲ್ಲಾ ಜನಜಾಗೃತಿ ವೇದಿಕೆಯ ರಾಜಣ್ಣ ಕೊರವಿ, ಸಮಾಜ ಸೇವಕ ಹಾಗೂ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತರಾದ ಸಂತೋಷ್ ಆರ್ ಶೆಟ್ಟಿ, ಸಂಸ್ಥೆಯ ನಿರ್ದೇಶಕರಾದ ದಿನೇಶ್ ಎಂ? ಯೋಜನಾಧಿಕಾರಿ ನಾಗೇಶ್ ವೈ.ಕೆ. ಉಪಸ್ಥಿತರಿದ್ದರು.