ಆಕ್ಸಿಜನ್ ಸಂಗ್ರಹಣೆ ಅಪರಾಧ ಅಲ್ಲ : ಬಸನಗೌಡ ಬಾದರ್ಲಿ

ಸಿಂಧನೂರು.ಮೇ.೨೨- ಯಾರಿಗೂ ಅಧಿಕಾರ ಹುಟ್ಟುತ್ತಲೇ ಬರುವುದಿಲ್ಲ, ಎಲ್ಲರು ಹೋರಾಟ ಮಾಡಿ ಅಧಿಕಾರ ಪಡೆಯಬೇಕು. ರೈತರ ಹೆಸರಿನಲ್ಲಿ ಹೋರಾಟ ನಡೆಸಿ ನಾಡಗೌಡ ಶಾಸಕರಾಗಿದ್ದನ್ನು ಮರೆಯಬಾರದು ಎಂದು ಯುಥ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಶಾಸಕ ವೆಂಕಟರಾವ್ ನಾಡಗೌಡರಿಗೆ ತೀರುಗೇಟು ನೀಡಿದರು.
ನಗರದ ಯುಥ್ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಆಕ್ಸಿಜನ್ ಸಂಗ್ರಹ ಮಾಡಿ ಇಟ್ಟುಕೊಳ್ಳುವುದು ಅಪರಾಧ ಅಲ್ಲ, ನನಗಾಗಿ ಆಕ್ಸಿಜನ್ ಇಟ್ಟುಕೊಳ್ಳದೆ ಜನರ ಪ್ರಾಣ ರಕ್ಷಣೆಗಾಗಿ ಇಟ್ಟುಕೊಂಡಿದ್ದೇನೆ ಅದನ್ನು ನಾಡಗೌಡ ಅಪರಾಧ ಎಂದರೆ ನಾನೇನು? ಮಾಡಲ್ಲಿ ಎಂದು ಹೇಳಿದರು.
ಶಾಸಕ ವೆಂಕಟರಾವ್ ನಾಡಗೌಡ, ತಾಲೂಕಾಡಳಿತ, ಸರ್ಕಾರ ತಾಲೂಕಿನ ಜನರಿಗೆ ಆಕ್ಸಿಜನ್ ಒದಗಿಸಲು ವಿಫಲವಾಗಿದ್ದು. ಶಾಸಕ ನಾಡಗೌಡ ಹಾಗೂ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕರಿ ಡಾ|| ಹನುಮಂತ ರೆಡ್ಡಿ ದೂರವಾಣಿ ಕರೆ, ಪತ್ರ ನೀಡಿದ ಮೇಲೆ ನನ್ನಲ್ಲಿದ್ದ ಆಕ್ಸಿಜನ ನೀಡಿ ಮಾನವಿಯತೆ ಮೆರೆದು ಜನರ ಪ್ರಾಣ ಉಳಿಸಿದ್ದೇನೆ. ಕೋರ್ಟ್, ಕಾನೂನು, ಪ್ರಕರಣ ಆ ಮೇಲೆ ಮೊದಲು ಜನರ ಪ್ರಾಣ ಮುಖ್ಯ ಎಂದರು.
ಬಸನಗೌಡ ಬಾದರ್ಲಿ ಫೌಂಡೇಶನ್‌ವತಿಯಿಂದ ಮೊದಲ ಕೊರೊನ್ ಅಲೆ ಬಂದಾಗ ೩೦ ಸಾವಿರ ಜನರಿಗೆ ಆಹಾರ ಕಿಟ್ ವಿತರಿಸಿ, ವೈದ್ಯಕೀಯ ಸೇವೆ ಮತ್ತು ರಕ್ತದಾನ ಮಾಡಿದ್ದು. ಕೊರೊನ್ ೨ನೇ ಬಂದಾಗಲು ಉಚಿತ ಆಕ್ಸಿಜನ್ ನೀಡುವ ಜೊತೆಗೆ ನಿರ್ಗತಿಕರಿಗೆ, ಆಸ್ಪತ್ರೆಯಲ್ಲಿರುವವರಿಗೆ ಆಹಾರವನ್ನು ವಿತರಿಸಿದ್ದೇನೆ.
ಜನರಿಗೆ ಸಹಾಯ ಮಾಡಲು ಅಧಿಕಾರ ಬೇಕಾಗಿಲ್ಲ. ಮಾನವೀಯತೆ ಬೇಕು, ಅಧಿಕಾರ ಇಲ್ಲದೆ ಸಣ್ಣ ಹುಡಗನಾದ ನಾನು ಇಷ್ಟು ಜನ ಸಹಾಯ ಮಾಡುತ್ತಿದ್ದೇನೆ. ಅಧಿಕಾರದಲ್ಲಿರುವ ನಾಡಗೌಡ ವೈಯಕ್ತಿಕವಾಗಿ ಜನರಿಗಾಗಿ ಎನು? ಮಾಡಿದ್ದಾರೆ ಎಂದು ಜನರ ಮುಂದೆ ಬಹಿರಂಗಪಡಿಸಲಿ ಎಂದು ಆಗ್ರಹಸಿದರು.
ಎರಡು ಬಾರಿ ಶಾಸಕರಾಗಿ, ಮಂತ್ರಿಯಾಗಿ ಅನುಭವ ಇರುವ ಶಾಸಕ ನಾಡಗೌಡ ಯಾರ ಬಗ್ಗೆ ಮಾತನಾಡುವಾಗ ಆಲೋಚನೆ ಮಾಡಿ ಮಾತನಾಡಬೇಕು ಹೊರತು ಏಕ ವಚನದಲ್ಲಿ ಮಾತನಾಡುವುದು ಅವರಿಗೆ ಶೋಭೆ ತರುವಂತದಲ್ಲ. ರೈತ ಕುಟುಂಬದಿಂದ ಬಂದಿರುವ ನನ್ನು ನಾಡಗೌಡ ಏಕವಚನದಲ್ಲಿ ಹಗುರವಾಗಿ ಮಾತನಾಡುತ್ತಿರುವುದು ನನ್ನಗೆ ನೋವು ಉಂಟು ಮಾಡಿದೆ. ಯಾರು ಜನಪರವಾಗಿ ಕೆಲಸ ಮಾಡಿದ್ದಾರೆ ತಾಲೂಕಿನ ಜನತೆಗೆ ಗೊತ್ತಿದೆ. ನಿಮಗೆ ಸಹ ಗೊತ್ತಿಲ್ಲವೆ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡರಾದ ಶಿವುಕುಮಾರ ಜವಳಿ, ಆರ್ ವೆಂಕಟೇಶ ನಾಯಕ, ಖಾಜಾ ರೌಡಕುಂದಾ, ಹನುಮೇಶ ನಾಯಕ ಸೇರಿದಂತೆ ಅನೇಕರು ಇದ್ದರು.