ಆಕ್ಸಿಜನ್ ಯಂತ್ರ ಕೊಡುಗೆ . ರಾಘವೇಂದ್ರ ರೆಡ್ಡಿ

ಎಮ್ಮಿಗನೂರು ಜೂ 02 : ಜೀವನಕ್ಕಿಂತ ಜೀವ ಮುಖ್ಯ ಎಂದು ಬಿಜೆಪಿ ಯುವ ಮುಖಂಡರಾದ ಏಳ್ಳಾರ್ತಿ ರಾಘವೇಂದ್ರ ರೆಡ್ಡಿ ತಿಳಿಸಿದರು.ಅವರು ಎಮ್ಮಿಗನೂರಿನ ಕರ್ನಾಟಕ ಪಬ್ಲಿಕ ಶಾಲೆಯ ಉಚಿತ ಕೋವಿಡ್ ಆರೈಕೆ ಕೇಂದ್ರಕ್ಕೆ ಹಂಪಿ ಸಾವಿರ ದೇವರ ಮಠದ ಶ್ರೀ ವಾಮದೇವಾ ಶಿವಾಚಾರ್ಯರು ಸಾನಿದ್ಯದಲ್ಲಿ ರೂ 65 ಸಾವಿರದ 5 ಲೀಟರಿನ ಆಕ್ಸಿಜನ್ ಯಂತ್ರ ಕೊಡುಗೆ ನೀಡಿ ಮತನಾಡಿ. ಕೋರೋನಾ ನಿಯಂತ್ರಿಸಲು ಪ್ರತಿಯೊಬ್ಬರ ಮಾಸ್ಕ್ ಧರಸಿ ಸಾಮಾಜಿಕ ಆಂತರದೊಂದಿಗೆ ಸ್ವಯಂ ಕಾಳಜಿ ಅಗತ್ಯ ಅಲ್ಲದೇ ಮಾನವಿಯ ನೆಲಗಟ್ಟಿನಲ್ಲಿ ಕೋರೋನಾ ಸೊಂಕಿತರಿಗೆ ಧಾನಮಾಡಲು ಮುಂದೆ ಬರಬೇಕು ಎಂದರು
ನಂತರ ಸ್ಥಳೀಯ ಹಂಪಿ ಸಾವಿರ ದೇವರ ಮಠದ ಶ್ರೀ ವಾಮದೇವಾ ಶಿವಾಚಾರ್ಯರು ಮತನಾಡಿ. ಸಾವಿರ ಮಠದ ಶ್ರೀ ಕೋರೋನಾ ವೇಳೆಯಲ್ಲಿ ಪ್ರತಿಯೊಬ್ಬರ ಆರೋಗ್ಯ ವಿಷಯದಲ್ಲಿ ಜಪತಪ ಗಳಿಗಿಂತ ಧಾನ ಧರ್ಮ ಮುಖ್ಯ ಎಂದರು
ಈ ವೇಳೆ ಮಾಜಿ ಶಾಸಕ ಟಿ.ಚ್. ಸುರೇಶ ಬಾಬು, ಗ್ರಾ.ಪಂ ಅಧ್ಯಕ್ಷೆ ಚನ್ನದಾಸರ ಅಂಜಿನಮ್ಮ, ಪಿಡಿಒ ತಾರುನಾಯಕ, ಗ್ರಾಮಲೆಕ್ಕಧಿಕಾರಿ ವಿ.ಎ. ಮಂಜುನಾಥ, ಮುಖಂಡರಾದ ಬಿ. ಮಹೇಶಗೌಡ, ಪಿಗ್ನಿ ಶರಣ ಬಸವನಗೌಡ, ಕಿರಿಯ ಅರೋಗ್ಯ ಸಹಾಯಕ ಬಸವನಗೌಡ, ಗ್ರಾಪಂ ಸದಸ್ಯರು, ಕೋವಿಡ್ ಕೇಂದ್ರದ ಕಾರ್ಯಕರ್ತರು. ಆತಿಥಿಶಿಕ್ಷಕರು ಹಾಗೂ ಇತರರು ಇದ್ದರು