ಆಕ್ಸಿಜನ್ ಬೆಡ್ ಕೊರತೆ ಇಲ್ಲ ಜನತೆಗೆ ಆತಂಕಬೇಡ:ಮಾಲಪಾಟಿ

ಬಳ್ಳಾರಿ, ಮೇ.02: ಜಿಲ್ಲೆಯಲ್ಲಿ ಕರೋನಾ ಸೋಂಕಿತರಿಗೆ ಆಕ್ಸಿಜನ್ ಬೆಡ್ ಗಳ ಕೊರತೆ ಇಲ್ಲ. ಈ ಬಗ್ಗೆ ಆತಂಕ ಪಡಬೇಡಿ ಎಂದು ಜನರಿಗೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹೇಳಿದ್ದಾರೆ.
ಇಂದು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯಲ್ಲಿ ಸದ್ಯ 1206 ಆಕ್ಸಿಜನ್ ಬೆಡ್ ಗಳಿವೆ. ಮೇ.9ರ ವೇಳೆಗೆ ಜಿಂದಾಲ್ ಆವರಣದಲ್ಲಿ 220 ಬೆಡ್ ಗಳು ಲಭ್ಯವಾಗಲಿವೆ. ಅದಕ್ಕಾಗಿ ವಿನಾಕಾರಣ ಜನ ಊಹಾಪೋಹಾದ ವದಂತಿಗಳ ಬಗ್ಗೆ ನಂಬದೆ ಚಿಕಿತ್ಸೆ ಪಡೆಯಿರಿ ಎಂದಿದ್ದಾರೆ.
ಸದ್ಯ ಬಳ್ಳಾರಿಯ ಟ್ರಾಮ್ ಕೇರ್, ಜಿಂದಾಲ್ ಸಂಜೀವಿನಿ ಮತ್ತು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 108, ಐಸಿಯು ಬೆಡ್ ಗಳ ವ್ಯವಸ್ಥೆ ಇದೆ. 70 ವೆಂಟಿಲೇಟರ್ ಗಳಿದ್ದು ಇನ್ನು 50 ವೆಂಟಿಲೇಟರ್ ಗಳನ್ನು ಸದ್ಯದಲ್ಲೇ ಸರ್ಕಾರ ನೀಡಲಿದೆಂದು ತಿಳಿಸಿದರು.
ಈಗ ಜಿಲ್ಲೆಯಲ್ಲಿ 9531 ಸಕ್ರಿಯ ಪ್ರಕರಣಗಳಿದ್ದು 829 ಜನರು ಆಸ್ಪತ್ರೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಹೋಮ್ ಐಸೊಲೇಷನ್ ನಲ್ಲಿದ್ದಾರೆ. ಕಳೆದ ಏಪ್ರಿಲ್ ಎರಡನೇ ವಾರದಿಂದ ಸೋಂಕು ಹರಡುವುದು ಹೆಚ್ಚಾಗಿದ್ದು ಸೋಂಕಿನಿಂದ ಬಳಲಿ ತಡವಾಗಿ ಚಿಕಿತ್ಸೆಗೆ ಬರುತ್ತಿರುವುದು ಮರಣ ಸಂಖ್ಯೆ ಹೆಚ್ಚುತ್ತಿದೆಂದರು.
ಕೋವಿಡ್ ಆಸ್ಪತ್ರೆಗಳಿಗೆ ಟ್ಯಾಂಕ್ ಮೂಲಕ ಆಮ್ಲಜನಕ ಪೂರೈಕೆ ಮಾಡುತ್ತಿದ್ದರೆ, ತಾಲೂಕು ಕೇಂದ್ರಗಳಲ್ಲಿ ಜಂಬೋ ಸಿಲಿಂಡರ್ ಗಳ ಮೂಲಕ ನೀಡುತ್ತಿದೆ. ಪ್ರತಿದಿನ 27 ಟನ್ ಆಕ್ಸಿಜನ್ ಬೇಕಿದೆ ಅದರ ಕೊರತೆಯೂ ಇಲ್ಲ ಎಂದರು.
ಹಾಸ್ಟೆಲ್ ಗಳು, ವಿಮ್ಸ್ ಸಭಾಂಗಣ ಸೇರಿದಂತೆ ಇನ್ನಿತರೆಡೆಗಳಲ್ಲಿ ಬೆಡ್ ವ್ಯವಸ್ಥೆ ಮಾಡಲು ಸಿದ್ದವಿದೆ. ಜನತೆ ಯಾವುದೇ ಕಾರಣಕ್ಕೂ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ ಎಂದು ಹೆದರಬೇಕಾಗಿಲ್ಲವೆಂದರು.
ಪರೀಕ್ಷೆ
ಕೋವಿಡ್ ಪರೀಕ್ಷೆ ಸದ್ಯ ವಿಮ್ಸ್ ನಲ್ಲಿ ನಡೆಯುತ್ತಿದೆ. ದಿನನಿತ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಬರುವ ಮಂಗಳವಾರ ಇಲ್ಲವೇ ಬುಧವಾರದಿಂದ ಒಂದು ಪ್ರಯೋಗಾಲಯ ಆರಂಭಗೊಳ್ಳಲಿದೆ.
ಇನ್ನು ಎರಡು ಆರ್.ಟಿ.ಪಿ.ಸಿ.ಆರ್ ಯಂತ್ರಗಳಿಗೆ ಆರ್ಡರ್ ಮಾಡಿದೆ. ಅವು ಸಹ ಬರಲಿದ್ದು ಒಟ್ಟಾರೆ ಮೇ.15ರ ನಂತರದ ದಿನನಿತ್ಯ 3 ರಿಂದ 3ವರೆ ಸಾವಿರ ಪರೀಕ್ಷೆ ಪ್ರಯೋಗಾಲಯದ ಮೂಲಕ ನಡೆಯಲಿದೆಂದು ತಿಳಿಸಿದರು.
ಹೆಚ್ಚುವರಿ
ಸೆಂಟನರಿ ಹಾಲ್ ನ ಫೀವರ್ ಕ್ಲಿನಿಕ್ ನಲ್ಲಿ ಒತ್ತಡ ಹೆಚ್ಚುತ್ತಿರುವುದರಿಂದ ತಾಳೂರು ರಸ್ತೆಯ ಶಾಂತಿ ಶಿಶುವಿಹಾರ ಬಳಿ ಮತ್ತೊಂದು ಫೀವರ್ ಕ್ಲಿನಿಕ್ ಆರಂಭಿಸಿದೆಂದು ಹೇಳಿದರು.
ಖಾಸಗಿ
ನಗರದ ಶಾವಿ, ಅನುಷ್ಕಾ, ವಾಯ್ಸ್, ಆರುಣೋದಯ, ನವೋದಯ ಆಸ್ಪತ್ರೆಗಳಲ್ಲಿ ಸಹ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಮತ್ತು ಹಾರೈಕೆ ಪಾವತಿ ಆಧಾರದಲ್ಲಿ ನೀಡುತ್ತಿದೆ. ಹೆಚ್ಚಿನ ಧರ ವಿಧಿಸಿದ ಬಗ್ಗೆ ದೂರು ಬಂದರೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಿದೆಂದು ಹೇಳಿದರು.
ವ್ಯಾಕ್ಸಿನ್ ಕೊರತೆ
ಕೋ ವ್ಯಾಕ್ಸಿನ್ ಕೊರತೆ ಇದೆ. ಅದರ ಪೂರೈಕೆಯಾಗಿಲ್ಲ, 45 ವರ್ಷ ಮೇಲ್ಪಟ್ಟವರಿಗೆ ಸದ್ಯ ಕೋವಿಶೀಲ್ಡ್ ನೀಡುತ್ತಿದೆ. ಕೋವ್ಯಾಕ್ಸಿನ್ ಮೊದಲ ಡೋಜ್ ಪಡೆದವರಿಗೆ ಅದು ಬಂದ ಮೇಲೆ 2ನೇ ಡೋಜ್ ನೀಡಲಿದೆ. ಜನರು ಸಹಕಾರಬೇಕೆಂದರು.
ಜಿ.ಪಂ. ಮುಖ್ಯ ಕಾರ್ಯದರ್ಶಿ ನಂದಿನಿ ಅವರು ಗ್ರಾಮೀಣ ಪ್ರದೇಶದಲ್ಲಿ ಸಹ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿದೆ. ಇನ್ನು ಜನತಾ ಕರ್ಫ್ಯೂನಿಂದ ನಗರದಿಂದ ಹಳ್ಳಿಗೆ ಬಂದವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ನೀಡುತ್ತಿದೆಂದರು.
ಎಸ್ಪಿ ಅಡಾವತ್, ಎಡಿಸಿ ಮಂಜುನಾಥ್, ಡಿ.ಹೆಚ್.ಓ ‌ಡಾ.ಜನಾರ್ಧನ್ ಇದ್ದರು.