ಆಕ್ಸಿಜನ್ ಪ್ಲ್ಯಾಂಟ್ ಘಟಕಕ್ಕೆ ಮುನೇನಕೊಪ್ಪ ಚಾಲನೆ


ಅಣ್ಣಿಗೇರಿ.ಜೂ.4: ಕೋವಿಡ್ ಸೊಂಕು 2 ಮತ್ತು 3 ನೇ ಅಲೆ ತಡೆಗಟ್ಟುವಲ್ಲಿ ಸಮರೋಪಾದಿಯಲ್ಲಿ ಸರ್ಕಾರ ವೈದ್ಯಕೀಯ ಸೌಲಭ್ಯ ಕಲ್ಪಿಸುವಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಲ್ಲಿ ಸನ್ನದ್ದವಾಗಿದ್ದು ,ತಾಲೂಕಿನಲ್ಲಿÀ ಕೋವಿಡ್ ಸೊಂಕಿತರು ಆಕ್ಷಿಜನ್ ಕೊರತೆಯಿಂದ ಸಾವು-ನೋವು ಸಂಭüವಿಸದಂತೆ ರಾಜ್ಯದ ಧಾರವಾಡ ಜಿಲ್ಲೆಯಲ್ಲಿ ಮೊಟ್ಟ ಮೊದಲು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 1 ಕೋಟಿ ರೂಗಳ ವೆಚ್ಚದಲ್ಲಿ ಆಕ್ಷಿಜೆನ್ ಪ್ಲಾಂಟ್ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿ, 280 ಲೀಟರ್ ಸಾಮಥ್ರ್ಯದ ಆಕ್ಷಿಜೆನ್ ಘಟಕಕ್ಕೆ 1 ಟನ್ ಸಾಮಥ್ರ್ಯದ ಆಕ್ಷಿಜನ್ ಸ್ಟೋರೆಜ್ ಟ್ಯಾಂಕರ್ ನಿರ್ಮಿಸುವುದಾಗಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಪಟ್ಟಣದ ಆರಕ್ಷಕ ಇಲಾಖೆಯಲ್ಲಿ ನಿರಮಯ ಪೌಂಡೇಶನ ವತಿಯಿಂದ ಸ್ಟೀಮ್‍ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳು ಕಾರ್ಯ ಹಂತದಲ್ಲಿವೆ. ಕೋವಿಡ್-19 ತಡೆಗಟ್ಟವ ಸಂದರ್ಭದಲ್ಲಿ ಸರ್ಕಾರ ಆರ್ಥಿಕ ಸಂಕುಷ್ಟದಲ್ಲಿದ್ದರೂ ಯಾವುದೇ ವೈದ್ಯಕಿಯ ಸೌಲಭ್ಯ ಕಲ್ಪಿಸುವಲ್ಲಿ ಹಿಂದೇಟು ಹಾಕದೇ ಮುಂಜಾಗ್ರತ ಕ್ರಮಕೈಗೊಂಡಿದೆ.
ಸರ್ಕಾರದ ಕಾರ್ಯಯೋಜನೆಯಲ್ಲಿ ಅನೇಕ ಸಂಘ ಸಂಸ್ಥೆಗಳು, ಸೇವಾ ಟ್ರಸ್‍ಗಳು,ದಾನಿಗಳು, ಸಾಮಾಜಿಕ ಕಳಕಳಿಯಿಂದ ಆರ್ಥಿಕ ನೆರವು ನೀಡುತ್ತಿದ್ದು, ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ವೈದ್ಯಕೀಯ ಸೌಲಭ್ಯ ಕಲ್ಪಿಸುವಲ್ಲಿ 5 ಕೋಟಿ ರೂಗಳು ದಾನಿಗಳು ನೀಡುವುದಾಗಿ ತಿಳಿಸಿದ್ದಾರೆ. ಹುಬ್ಬಳ್ಳಿ ನಿರಮಯ ಪೌಂಡೇಶನ್ ಸ್ಟೀಮ್‍ನ್ನು ನಮ್ಮ ಕ್ಷೇತ್ರದ ಆರಕ್ಷಕ ಇಲಾಖೆ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ವಿತರಿಸಿದ್ದರಿಂದ ಅಭಿನಂದಿಸುವುದಾಗಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಕೊಟ್ರೇಶ ಗಾಳಿ, ಮುಖ್ಯಾಧಿಕಾರಿ ಕೆ.ಎಪ್.ಕಟಗಿ, ಆರಕ್ಷಕ ಠಾಣಾಧಿಕಾರಿ ಎಲ್.ಕೆ.ಜ್ಯೂಲಿಕಟ್ಟಿ, ಪಿ.ಎಸ್.ಆಯ್. ಬಿ.ಕೆ.ಹೂಗಾರ. ಮಾಜಿ ಕ್ರೇಡಿಲ್ ಆಧ್ಯಕ್ಷ ಷಣ್ಮುಖ ಗುರಿಕಾರ, ಶಿವಾನಂದ ಹೊಸಳ್ಳಿ, ಬಸವರಾಜ ಯಳವತ್ತಿ, ಡಾ ಮಲ್ಲಿಕಾರ್ಜುನ ಬಾಳಿಕಾಯಿ ನೇತ್ರತ್ವದ ಹುಬ್ಬಳ್ಳಿಯ ನಿರಮಯ ಪೌಂಡೇಶನ್ ಸಂಸ್ಥೆಯ ಪ್ರವೀಣ ಹಾಳದೋಟರ, ಅಶೋಕ ಕುರಿ, ಆನಂದ ಹಿರೇಗೌಡರ, ಆನಂದ ಜಕ್ಕನಗೌಡರ ಮಂಜುನಾಥ ಹಡಪದ, ಉಪಸ್ಥಿತರಿದ್ದರು.