ಆಕ್ಸಿಜನ್ ನೀಡುವಂತೆ ಒತ್ತಾಯ

ಬಾಗಲಕೋಟೆ,ಮೇ.5 : ಇತ್ತೀಚೆಗೆ ಕೋವಿಡ್-19 ನಿಂದ ಜನ ಮೃತಪಡುತ್ತಿರುವುದರಿಂದ ಜನರ ಆತಂಕ ಹೆಚ್ಚಾಗುತ್ತಿದ್ದು ಜನರ ಅತಂಕವನ್ನು ನಿವಾರಿಸಲು ಶಾಸಕ ಡಾ.ವೀರಣ್ಣ ಚರಂತಿಮಠ ಮೂರು ಟನ್ ಆಕ್ಸಿಜನ್ ನೀಡುವಂತೆ ಒತ್ತಾಯಿಸಿದರು.
ಬಾಗಲಕೋಟೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಮುರು ಟನ್ ಗಿಂತ ಹೆಚ್ಚಿನ ಆಕ್ಸಿಜನ್ ಕೊರತೆ ಇರುವುದರಿಂದ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಹಾಗೂ ಪೋಲೀಸ್‍ವರಿಷ್ಠಾಧಿಕಾರಿ ಲೋಕೇಶ್ ಜಗಲಾಸ್ಕರ ಮುಂತಾದವರ ಅಧಿಕಾರಿ ತಂಡದವರಿಂದ ಪ್ಲಾಂಡ್‍ಗೆ ಭೇಟಿ ನೀಡಿ ತುರ್ತಾಗಿ ಮೂರು ಟನ್ ಆಕ್ಸಿಜನ್ ಸರಕಾರಿ ಆಸ್ಪತ್ರೆಗಳಿಗೆ ನೀಡಲು ಆದೇಶಿಸಿದರು. ಆಕ್ಸಿಜನ್ ಪ್ಲಾಂಟ್‍ನ ಹರ್ಷ ಕಂಠಿ ಉಪಸ್ಥಿತರಿದ್ದರು.