ಆಕ್ಸಿಜನ್ ಟ್ಯಾಂಕ್ – ತರಕಾರಿ ಮಾರಾಟ ಸ್ಥಳ ಭೇಟಿ

ರಾಯಚೂರು.ಮೇ.೨೭- ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಅಗತ್ಯತೆಯ ಪೂರೈಸಲು ೨೦ ಕೆಎನ್ ಆಕ್ಸಿಜನ್ ಟ್ಯಾಂಕ್ ಅಳವಡಿಕೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಯುವ ಕಾಂಗ್ರೆಸ್ ಮುಖಂಡರಾದ ರವಿ ಬೋಸರಾಜು ಅವರು, ಇಂದು ಲಾಕ್ ಡೌನ್ ಮುಕ್ತ ವ್ಯವಹಾರ ಸಂದರ್ಭದಲ್ಲಿ ನಗರದ ವಿವಿಧ ವಾರ್ಡ್ ವ್ಯಾಪಾರ ಕೇಂದ್ರಗಳಿಗೆ ಭೇಟಿ ನೀಡಿದರು.
ವಾರ್ಡ್ ನಗರಸಭೆ ಸದಸ್ಯರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಸಾಮಾಜಿರ ಅಂತರ ಮತ್ತು ಮಾಸ್ಕ್ ಧಾರಣೆಗೆ ಮನವಿ ಮಾಡಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರದಂತೆ ಮತ್ತು ತರಕಾರಿ ದರಗಳ ಬಗ್ಗೆ ಮಾಹಿತಿ ಪಡೆದರು. ಸ್ಥಳೀಯವಾಗಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ, ಯಾವ ರೀತಿಯ ಸೌಕರ್ಯ ನೀಡಲಾಗಿದೆ ಎನ್ನುವ ಬಗ್ಗೆಯೂ ಕೇಳಿ ತಿಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವಹೀದ್, ತಿಮ್ಮಾರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.