ಆಕ್ಸಿಜನ್ ಜನರೇಟ್ ಸದ್ಬಳಕೆ ಮಾಡಿಕೊಳ್ಳಿ-ಚಂದ್ರಶೇಖರ ರೆಡ್ಡಿ

ರಾಯಚೂರು.ಮೇ.೨೨- ಅವರು ನಮ್ಮ ಶಿಕ್ಷಕರಗಳು ಗ್ರಾಮಿಣ ಮತ್ತು ನಗರ ಪ್ರದೇಶಗಳಲ್ಲಿ ಕೊರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಅಂತಹ ಶಿಕ್ಷಕರುಗಳಿಗೆ ಆರೋಗ್ಯದ ಸಮಸ್ಯೆಯಾಗಿ ಕೊರೋನಾ ಸೋಂಕು ತಗಲಿ ಸರಿಯಾಗಿ ಚಿಕಿತ್ಸೆ ಆಕ್ಸಿಜನ್ ವ್ಯವಸ್ಥೆ ಸಿಗದೆ ಅನೇಕ ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ಅಂತವರ ಕಷ್ಟ, ನೋವುಗಳನ್ನು ಮನಗೊಂಡು ರಾಯಕೇಮ್ ಪಿವಿಟಿ ಎಲ್‌ಟಿಡಿ ಕಂಪನಿ ಯವರಿಗೆ ಆಕ್ಸಿಜನ್ ಜನರೇಟರ್ ಗೆ ಮನವಿ ಮಾಡಿಕೊಂಡಾಗ ಸಕಾರಾತ್ಮಕವಾಗಿ ನಮ್ಮ ಮನವಿಗೆ ಸ್ಪಂದಿಸಿ ೨ ಜನರೇಟರ್‌ಗಳನ್ನು ನೀಡಿದ್ದಾರೆಂದು ಚಂದ್ರಶೇಖರ ರೆಡ್ಡಿ ಹೇಳಿದರು.
ಆಗಾಗಿ ನಮ್ಮ ರಾಯಚೂರು ತಾಲೂಕಿನ ಶಿಕ್ಷಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುಬೇಕೆಂದು ಮನವಿ ಮಾಡಿ ಆಕ್ಸಿಜನ್ ಕಿಟ್ ದೇಣಿಗೆ ನೀಡಿದ ಕಂಪನಿಯ ಮುಖ್ಯಸ್ಥರಿಗೆ ಈ ಸಂದರ್ಭದಲ್ಲಿಕರ್ನಾಟಕ ರಾಜ್ಯಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಯಚೂರು ಜಿಲ್ಲಾ ಘಟಕ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಉಪನಿರ್ದೇಶಕರವರು ರಾಯಚೂರು ಮತ್ತು ರಾಯಚೂರು ತಾಲೂಕ ಘಟಕದ ಅಧ್ಯಕ್ಷರಾದ ನಂದೇಶ, ಶಿಕ್ಷಕರಾದ ಕೃಷ್ಣಾಜಿ, ಹನುಮಂತಪ್ಪ ಉಪಸ್ಥಿತರಿದ್ದರು.
ಈ ಆಕ್ಸಿಜನ್ ಜನರೇಟರ್ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ. ಈ ಆಕ್ಸಿಜನ್ ಸೇವೆ ಅವಶ್ಯಕತೆ ಇರುವ ಶಿಕ್ಷಕರು ಮತ್ತು ಕುಟುಂಬದವರು ಈ ಸೌಲಭ್ಯವನ್ನು ಪಡೆಯಲು ಚಂದ್ರಶೇಖರ ರೆಡ್ಡಿ ಜಿಲ್ಲಾ ಅಧ್ಯಕ್ಷರು ಕ.ರಾ.ಪ್ರಾ.ಶಾ.ಶಿ.ಸ ಮೋ.ನಂ ೯೮೮೦೮೦೩೭೯೮. ಹಾಗೂ ರಾಯಚೂರು ತಾಲೂಕು ಅಧ್ಯಕ್ಷರಾದ ನಂದೀಶ್ ಅವರನ್ನು ಸಂರ್ಪಕಿಸಲು ವಿನಂತಿ.