ಆಕ್ಸಿಜನ್ ಜನರೇಟರ್ ಸ್ಥಾಪನೆ ಕಾಮಗಾರಿ ಪರಿಶೀಲನೆ

ಮೈಸೂರು,ಜೂ.9:- ಮೈಸೂರು ನಗರದ ಕೆ.ಆರ್.ಎಸ್. ರಸ್ತೆಯಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಆವರಣದಲ್ಲಿ 500 ಎಲ್ ಪಿಎಂ ಸಾಮಥ್ರ್ಯದ ಆಕ್ಸಿಜನ್ ಜನರೇಟರ್ ಸ್ಥಾಪನೆ ಮಾಡಲಿರುವ ಕಾಮಗಾರಿಯ ಸ್ಥಳವನ್ನು ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಅವರು ಲಕ್ನೋದಲ್ಲಿರುವ ಕಾನ್ಪುರ ಐಐಟಿ ಒಂದು ಕಾಲೇಜಿಗೆ ವಿಷಯ ತಿಳಿಸಿದಾಗ ಫ್ರಿ ಆಗಿ ಪ್ರತಿನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಒಂದೂವರೆ ಕೋಟಿ ರೂಪಾಯಿ ಬೆಲೆಬಾಳುವ ಜನರೇಟರ್‍ನ್ನು ನೀಡಿದ್ದಾರೆ. ಡೀನ್ ಅವರು ಮಾಡಿರುವುದು ಬಹಳ ಒಳ್ಳೆಯ ಕೆಲಸ. ಡೀನ್ ಅವರಿಗೂ ಐಐಟಿ ಕಾಲೇಜಿವರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಆಕ್ಸಿಜನ್ ಇಲ್ಲದಿದ್ದರೂ 50 ಜನರನ್ನು ನೋಡಿಕೊಳ್ಳಬಹುದು ಎಂದರು.
ಇದೇ ವೇಳೆ ಮೇಯರ್ ಚುನಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಪಕ್ಷದ ನಿರ್ಧಾರ ಏನಿರತ್ತೆ ಅದಕ್ಕೆ ತಕ್ಕಂತೆ ನಾವು ನಡೆಯಬೇಕು, ನನ್ನ ವೈಯುಕ್ತಿಕ ನಿರ್ಧಾರ ಏನಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭ ಪಾಲಿಕೆಯ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ ಜಿ, ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ. ನಂಜರಾಜ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆರ್.ಎಂ.ಓ ಡಾ.ಮೋಹನ್, ಆರೋಗ್ಯ ಇಲಾಖೆ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶ್ರೀನಾಥ್, ಕುಮಾರ್, ಮುಖಂಡರುಗಳಾದ ಪುನೀತ್, ಸಂಜೀವಿನಿಕುಮಾರ್, ಸೂರ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.