ಆಕ್ಸಿಜನ್ ಕೊರತೆ ನೀಗಿಸಲು ಸೋಮಣ್ಣ ಸೂಚನೆ

Sommana bbmp commission guvra guptha meetting on covid war room at bbmp

ಬೆಂಗಳೂರು, ಮೇ ೪- ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಎಚ್ಚರ ವಹಿಸಿ ಎಂದು ಪೂರ್ವ ವಲಯ ಕೋವಿಡ್ ಉಸ್ತುವಾರಿ ಸಚಿವ ವಿ. ಸೋಮಣ್ಣ ಸೂಚನೆ ನೀಡಿದರು.
ವಿಜಯನಗರ ಬಳಿ ಇರುವ ಶಾಸಕರ ಕಚೇರಿಯಲ್ಲಿ ಕೋವಿಡ್-೧೯ ಚಿಕಿತ್ಸೆಗೆ ಸಂಬಂಧಿಸಿದಂತೆ ವೈದ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆಯಾಗದಂತೆ ಎಚ್ಚರ ವಹಿಸಿ ಎಂದು ತಾಕೀತು ಮಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳಲ್ಲಿರುವ ಕೋವಿಡ್ ಸೋಂಕಿತರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಸಂಪೂರ್ಣ ನಿಗಾ ವಹಿಸಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ, ವಲಯ ಆಯುಕ್ತ ಬಸವರಾಜು, ಡಿಸಿಪಿ ಸಂಜೀವ್‌ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.
ವಾರ್ ರೂಂಗೆ ಭೇಟಿ
ಈ ಸಭೆಯ ನಂತರ ಸಚಿವ ಸೋಮಣ್ಣ ಅವರು ಬಿಬಿಎಂಪಿಯ ಕೋವಿಡ್ ವಾರ್ ರೂಂಗೆ ಭೇಟಿ ನೀಡಿ ಪಾಲಿಕೆ ಆಯುಕ್ತ ಗೌರವ ಗುಪ್ತ ಜತೆ ಚರ್ಚಿಸಿದರು.
ಅಗತ್ಯವಾದ ಲಸಿಕೆ ಹಾಗೂ ಔಷಧಿಗಳನ್ನು ಒದಗಿಸುವಂತೆಯೂ ಆಯುಕ್ತರಿಗೆ ಸೂಚನೆ ನೀಡಿದ ಅವರು, ಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತಾಗಲು ಎಲ್ಲ ಲಸಿಕಾ ಕೇಂದ್ರಗಳಿಗೂ ಲಸಿಕೆಗಳನ್ನು ಸಮರ್ಪಕವಾಗಿ ಸರಬರಾಜು ಮಾಡಿ, ಲಸಿಕೆ ಕೊರತೆ ಎದುರಾಗಬಾರದು ಎಂದು ಅವರು ತಿಳಿಸಿದರು.
ಪ್ರಭಾವ ಇರುವವರು, ಉಳ್ಳವರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಬಡವರು ಸೌಲಭ್ಯ ವಂಚಿತರಾಗಬಾರದು. ಹಾಗಾಗಿ ಬಡವರಿಗೆ ಮತ್ತು ಮನೆಗಳಲ್ಲೆ ಐಸೋಲೇಷನ್ ಆಗಿರುವವರಿಗೆ ಔಷಧಿಗಳನ್ನು ಸಮರ್ಪಕವಾಗಿ ಒದಗಿಸುವಂತೆ ಸಚಿವ ಸೋಮಣ್ಣ ಸೂಚಿಸಿದರು.