ಆಕ್ಸಿಜನ್ ಕೊರತೆ ನೀಗಿಸಲು ಮರ, ಗಿಡಗಳು ಅಗತ್ಯ: ಶಿವಯ್ಯ ಸ್ವಾಮಿ

ಬೀದರ:ಜೂ.5: ಆಕ್ಷಿಜನ್ ಕೊರತೆ ನೀಗಿಸಲು ಇಂದು ಮರ, ಗಿಡಗಳನ್ನು ನೆಟ್ಟು, ಅವುಗಳನ್ನು ಪೋಸಿಸುವಂತೆ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತರೂ ಹಾಗೂ ಕೇಂದ್ರ ಸರ್ಕಾರದ ಜಾಗೃತಿ ಹಾಗೂ ಮೇಲುಸ್ತುವಾರಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿರುವ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಅವರಣದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು.

ಇಂದು ಎಲ್ಲೆಡೆ ಕೋವಿಡ್ ಮಹಾಮಾರಿ ತನ್ನ ಎರಡನೇ ಅವತಾರದಿಂದ ಸಹಸ್ರಾರು ಜೀವಿಗಳನ್ನು ಬಲಿ ಪಡೆದು ಮೂರನೇ ಅಲೆಯತ್ತ ಮುನ್ನುಗ್ಗುತ್ತಿದೆ. ಇಂಥ ಆಮ್ಲಜನಕದ ಅಭಾವದಿಂದ ದೇಶ ತತ್ತರಿಸಿ ಹೋಗಿದೆ. ವಿದೇಶದಿಂದ ಆಮ್ಲಜನಕ ತರಿಸಿಕೊಂಡು ಇಂದು ಬದುಕುತ್ತಿರುವ ಮನಗೆ ನಮ್ಮತನದ ಸಂಪೂರ್ಣ ಅರಿವಿ ಮರೆಮಾಚಿದಂತೆ ಕಾಣುತ್ತಿದೆ. ಇಡೀ ವಿಶ್ವಕ್ಕೆ ಪರಿಸರ ಹಾಗೂ ಪ್ರಾಕೃತಿಕ ವಿದ್ಯಮಾನದಲ್ಲಿ ಮಾದರಿಯಾದ ನಮ್ಮ ದೇಶದಲ್ಲಿ ಇಂದು ಆಮ್ಲಜನಕ ಕೊರತೆ ಕಾಣಲು ಗಿಡ, ಮರಗಳು ಕಡಿದು ಬೃಹತ್ತಾಕಾರದ ಕಟ್ಟಡಗಳು ಕಟ್ಟುವ ಮೂಲಕ ಪರಿಸರ ವಿನಾಶಿಗಳಾಗಿದ್ದೇವೆ. ಭವಿಷ್ಯದಲ್ಲಿ ಆಮ್ಲಜನಕದ ಕೊರೆತೆಯಿಂದ ಪಾರಾಗಲು ಪ್ರತಿಯೊಬ್ಬರು ತಮ್ಮ ಮನೆ, ಸಾರ್ವಜನಿಕ ಸ್ಥಳಗಳು ಸೇರಿದಂತೆ ಎಲ್ಲಂದರಲ್ಲಿ ಬೇವು, ಆಲದ ಮರಗಳು ನೆಟ್ಟು ಭವಿಷ್ಯಕ್ಕಗಿ ಆಕ್ಷಿಜನ್ ಕೂಡಿಡಬೇಕೆಂದು ಕರೆ ಕೊಟ್ಟರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕøತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕøತರೂ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಮೌಲಪ್ಪ ಮಾಳಗೆ ಮುಖ್ಯ ಅತಿಥಿಗಳಾಗಿದ್ದರು. ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ ನಾಡಗೀರ್ ಅಧ್ಯಕ್ಷತೆ ವಹಿಸಿದ್ದರು.

ಯುವ ಸ್ಪಂದನ ವಿಭಾಗದ ಯುವ ಸಮಾಲೋಚಕಿ ಸುಜಾತಾ ಬಕ್ಕಪ್ಪ, ಯುವ ಪ್ರವರ್ತಕ ಅಂಬರೀಶ, ಇಲಾಖೆಯ ತರಬೇತಿದಾರ ಅಬ್ದುಲ್ ಖುದ್ದೂಸ್, ಮಾಜೀದ್, ಅಜಯ, ಶಬಿರ್ ಸೇರಿದಂತೆ ಇಲಾಖೆಯ ಇತರೆ ಸಿಬ್ಬಂದಿ ಹಾಜರಿದ್ದರು.