ಆಕ್ಸಿಜನ್ ಕೊರತೆಯಿಂದ ವೈದ್ಯರ ಪತ್ನಿ ಸಾವು

ಕಲಬುರಗಿ ಮೇ 2: ನಗರದ ಖ್ಯಾತ ವೈದ್ಯ ಡಾ.ಸಿ.ಎಸ್ ಪಾಟೀಲ ಅವರ ಪತ್ನಿ ಅರುಂಧತಿ ಪಾಟೀಲ ( 54) ಶನಿವಾರ ಸಂಜೆ ಮೃತಪಟ್ಟಿದ್ದಾರೆ.
ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಅವರನ್ನು ನಗರದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಅರುಂಧತಿ ಪಾಟೀಲ ಅವರ ಸಾವು ಸಂಭವಿಸಿದೆ.
ಮೃತರು ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.ಜೇವರ್ಗಿ ತಾಲೂಕಿನ ಗಂವ್ಹಾರದಲ್ಲಿ ರಾತ್ರಿ ಅಂತ್ಯಕ್ರಿಯೆ ನಡೆಯಿತು.