ಆಕ್ಸಿಜನ್, ಕಾನ್ಸಂಟ್ರೇಟರ್ ಉಚಿತ ಸೇವೆಗೆ ಚಾಲನೆ


ಹುಬ್ಬಳ್ಳಿ, ಮೇ 19: ನಗರದ ದಾಜಿಬಾನ್ ಪೇಟ್ ಎಸ್‍ಎಸ್‍ಕೆ ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ, ಹುಬ್ಬಳ್ಳಿ ಸಂಸ್ಥೆಯ ನೇತೃತ್ವದಲ್ಲಿ, ಸಮಾಜದ ದಾನಿಗಳು ಹಾಗೂ ವಲ್ರ್ಡ್ ಸ್ಕ್ವೇರ್ ಸಂಸ್ಥೆಯ ಮಾಲೀಕರಾದ ಯೋಗೇಶ ಅಶೋಕ ಹಬೀಬ ಮತ್ತು ಪಾಲುದಾರರು ಇವರ ಅನುದಾನದಡಿಯಲ್ಲಿ ಸಾರ್ವಜನಿಕರಿಗಾಗಿ ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದವರಿಗಾಗಿ ಕೊರೊನಾ ರೋಗ ಪೀಡಿತರಿಗೆ ಆಕ್ಸಿಜನ್ ಮತ್ತು ಕಾನ್ಸಂಟ್ರೇಟರಗಳ ಉಚಿತ ಸೇವೆಯನ್ನು ಮನೆ ಮನೆಗೆ ಕಲ್ಪಿಸುವ ಯೋಜನೆಗೆ ಇಂದು ದಾಜಿಬಾನ ಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನ ಎದುರುಗಡೆ ಚಾಲನೆ ನೀಡಲಾಯಿತು.
20 ಕಾನ್ಸಂಟ್ರೇಟರಗಳು 30 ಕೆ.ಜಿ ಯ 20 ಸಿಲಿಂಡರಗಳು ಹಾಗೂ 10 ಕೆ.ಜಿ. ಯ 15 ಸಿಲೆಂಡರ್ಗಳು ಈ ರೀತಿ ವ್ಯವಸ್ಥೆಯೊಂದಿಗೆ ಉಚಿತ ಸೇವೆಯನ್ನು ಹೊಂದಿದೆ.
ಎಸ್‍ಎಸ್‍ಕೆ ಕೇಂದ್ರ ಪಂಚ ಸಮಿತಿಯ ಮುಖ್ಯ ಧರ್ಮದರ್ಶಿಗಳಾದ ನೀಲಕಂಠಸಾ ಪಿ. ಜಡಿ ಇವರು ಈ ಒಂದು ಯೋಜನೆಗೆ ನೀಡಿ ಮಾತನಾಡುತ್ತಾ ಇದರ ಸದುಪಯೋಗವನ್ನು ಕೊರೊನಾ ಪೀಡಿತ ಬಡ ಮತ್ತು ಮಧ್ಯಮ ವರ್ಗದ ಎಲ್ಲ ಸಮಾಜದ ಬಾಂಧವರು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡರು. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿರುವ ವಲ್ರ್ಡ್ ಸ್ಕ್ವೇರ್ಸ್ ಮಾಲೀಕರಾದ ಯೋಗೇಶ ಹಬೀಬ ಮತ್ತು ಪಾಲುದಾರರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಎಸ್‍ಎಸ್‍ಕೆ ಸಮಾಜದ ರಾಜ್ಯಾಧ್ಯಕ್ಷರು, ಮಾಜಿ ಶಾಸಕರಾದ ಅಶೋಕ ಕಾಟವೆ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗೇಶ ಕಲಬುರ್ಗಿ, ಎಸ್‍ಎಸ್‍ಕೆ ಬ್ಯಾಂಕಿನ ಚೆರ್ಮನ್ನರಾದ ವಿಠ್ಠಲ ಪಿ. ಲದ್ವಾ, ಮಾಜಿ ಮಹಾಪೌರರಾದ ಡಿ.ಕೆ. ಚವ್ಹಾಣ, ಕೇಂದ್ರ ಪಂಚ ಸಮಿತಿಯ ಉಪ ಮುಖ್ಯ ಧರ್ಮದರ್ಶಿಗಳಾದ ಹನುಮಂತಸಾ ನಿರಂಜನ, ಟ್ರಸ್ಟಿಗಳಾದ ಭಾಸ್ಕರ ಎನ್. ಜಿತೂರಿ, ಶ್ರೀಕಾಂತ ಹಬೀಬ, ರಾಜು ದರ್ಮದಾಸ, ಮುಖಂಡರುಗಳಾದ ಲಕ್ಷ್ಮಣ ದಲಬಂಜನ, ಕಾಶಿನಾಥ ಖೋಡೆ, ವಿ.ವಿ.ಇರಕಲ, ಪ್ರಕಾಶ ಬುರುಬುರೆ, ಮಿಥುನ ಚವಾನ, ವಿಜಯ ಮೆಹರವಾಡೆ, ಜೆ.ವಿ. ಇರಕಲ್, ಪ್ರವೀಣ ಹಬಿಬ, ಪರಶುರಾಮ ದೊಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಾಜದ ಪರವಾಗಿ ವಲ್ರ್ಡ್ ಸ್ಕ್ವೇರ್ನ ಸಹಯೋಗದೊಂದಿಗೆ ಕೋವಿಡ್ 19 ರೋಗಿಗಳಿಗಾಗಿ ಐಸೋಲೇಷನ್ ಸೆಂಟರ್ ಪ್ರಾರಂಭಿಸುವ ಯೋಜನೆ ಹಾಕಿಕೊಳ್ಳಲಾಗುತ್ತಿದೆ.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರಾದ ರಾಜು ಜರತಾರಘರ ನಿರೂಪಿಸಿದರು.