ಆಕ್ಸಿಜನ್ ಆಕ್ಸೋಮೀಟರ್ ಹಸ್ತಾಂತರ

ಹನೂರು: ಮೇ.18: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೆÇಲೀಸ್ ಇಲಾಖೆ ವತಿಯಿಂದ ಆಕ್ಸಿಜನ್ ಆಕ್ಸೋಮೀಟರ್ ಪರಿಕರಗಳನ್ನು ಜಿಲ್ಲಾ ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿ ಅನಿತಾ.ಬಿ ಹದ್ದಣ್ಣನವರ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಅವರಿಗೆ ಹಸ್ತಾಂತರ ಮಾಡಿದರು.
ನಂತರ ಮಾತನಾಡಿದ ಅವರು ಜಿಲ್ಲಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಹೆಚ್ಚಿನ ಸೋಂಕಿತರಿಗೆ ಆಮ್ಲಜನಕ ಅವಶ್ಯಕತೆ ಇರುವುದರಿಂದ ನಮ್ಮ ಇಲಾಖೆ ವತಿಯಿಂದ ಗಂಟೆಗೆ ಸುಮಾರು 15 ರಿಂದ 20 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡಬಹುದಾದ ಆಕ್ಸಿಜನ್ ಆಕ್ಸೋಮೀಟರ್‍ನ್ನು ನೀಡಲಾಗಿದ್ದು ಇದನ್ನು ಸಾರ್ವಜನಿಕರು ಉಪಯೋಗಕ್ಕೆ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ನಮ್ಮ ಇಲಾಖೆ ಸಿಬ್ಬಂದಿಗಳು ಸದುಪಯೋಗ ಮಾಡಿಕೊಳ್ಳಬಹುದು ಎಂದರು. ಜಿಲ್ಲೆಯ ಗುಂಡ್ಲುಪೇಟೆ ಹಾಗೂ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುಮಾರು 1 ಲಕ್ಷ ವೆಚ್ಚದ ತಲಾ ಒಂದೊಂದು ಆಕ್ಸಿಜನ್ ಆಕ್ಸೋಮೀಟರ್ ನೀಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭಗಳಲ್ಲಿ ಡಿವೈಎಸ್ಪಿ ನಾಗರಾಜು, ಇನ್ಸ್‍ಪೆಕ್ಟರ್ ಸಂತೋμï ಕಶ್ಯಪ್, ಸಿಬ್ಬಂದಿಗಳಾದ ಮುಖ್ಯ ಪೇದೆ ಗೋಪಾಲ್, ಪೇದೆಗಳಾದ ರಾಘವೇಂದ್ರ, ಬಿಳಿಗೌಡ ಹಾಜರಿದ್ದರು.