ಆಕ್ಸಫರ್ಡ್ ಆಂಗ್ಲಮಾಧ್ಯಮ ಪ್ರೌಢಶಾಲೆ;ಜೀನಿಯಸ್ ಅವಾರ್ಡ ಸ್ಪರ್ಧಾತ್ಮಕ ಪರೀಕ್ಷೆ ನಾಳೆ

ಮುದ್ದೇಬಿಹಾಳ.ಮೇ 17: ಇದೇ ಶೈಕ್ಷಣಿಕ ವರ್ಷದಿಂದ ಮುದ್ದೇಬಿಹಾಳ ಪಟ್ಟಣಕ್ಕೆ ಹೊಂದಿಕೊಂಡಿರುವ ವಿಜಯಪುರ ರಸ್ತೆ ಪಕ್ಕದ ಗುರಡ್ಡಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ನಾಗರಬೆಟ್ಟದ ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಶಾಖೆಯಾಗಿರುವ ಆಕ್ಸಫರ್ಡ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ವಿಭಾಗ ಪ್ರಾರಂಭಿಸಲಾಗುತ್ತಿರುವ ಹಿನ್ನೆಲೆ ಮೇ 18 ರಂದು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಜ್ಯೂನಿಯರ್ ಜೀನಿಯಸ್ ಮತ್ತು ಜೀನಿಯಸ್ ಆವಾರ್ಡ-2024 ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತ್‍ಗೌಡ ಪಾಟೀಲ ತಿಳಿಸಿದರು.
ಮಂಗಳವಾರ ಪ್ರೌಢಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 11-30ರಿಂದ ಪರೀಕ್ಷೆಗಳು ನಡೆಯುತ್ತವೆ. 5, 6 ಮತ್ತು 7ನೇ ತರಗತಿ ಪಾಸ್ ಆದವರು 6, 7 ಮತ್ತು 8ನೇ ತರಗತಿಗಳಿಗೆ ಪ್ರವೇಶ ಪಡೆಯಲು ಜ್ಯೂನಿಯರ್ ಜೀನಿಯಸ್ ಆವಾರ್ಡ ಸ್ಪರ್ಧೆ ನಡೆಯುತ್ತದೆ. ಪರೀಕ್ಷಾರ್ಥಿಗಳು ಶಾಲೆಯ ಐಡಿ ಕಾರ್ಡ, ಆಧಾರ ಕಾರ್ಡ ಕಡ್ಡಾಯವಾಗಿ ತರಬೇಕು. ಇಂಗ್ಲೀಷ್, ಗಣಿತ, ವಿಜ್ಞಾನ ವಿಷಯದ 50 ವಸ್ತುನಿಷ್ಠ ಬಹುಆಯ್ಕೆಯ ಪ್ರಶ್ನೆಗಳನ್ನೊಳಗೊಂಡ ಪ್ರಶ್ನೆಪತ್ರಿಕೆ ಇರುತ್ತದೆ. ಈ ಪರೀಕ್ಷೆಗಳಲ್ಲಿ ಮೊದಲ 5 ರ್ಯಾಂಕ್ ಪಡೆದುಕೊಂಡವರಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತದೆ. ಪ್ರಥಮ 10000 ರೂ, ದ್ವಿತಿಯ 7000 ರೂ, ತೃತಿಯ 5000 ರೂ ನಗದು ಪುರಸ್ಕಾರ ಜೊತೆಗೆ ಮೂರೂ ಸ್ಥಾನ ಪಡೆದ ಪ್ರತಿಯೊಬ್ಬರಿಗೂ 18000 ರೂ ಶಿಷ್ಯವೇತನ ಕೊಡಲಾಗುತ್ತದೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಲು ಜೀನಿಯಸ್ ಆವಾರ್ಡ ಸ್ಪರ್ಧೆ ನಡೆಯುತ್ತದೆ. ಪ್ರಥಮ 10000 ರೂ, ದ್ವಿತಿಯ 7000 ರೂ, ತೃತಿಯ 5000 ರೂ ನಗದು ಪುರಸ್ಕಾರ ಜೊತೆಗೆ ಮೂರೂ ಸ್ಥಾನ ಪಡೆದ ಪ್ರತಿಯೊಬ್ಬರಿಗೂ 50000 ಶಿಷ್ಯವೇತನ ಕೊಡಲಾಗುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ಹಾಲ್‍ಟಿಕೇಟ್, ಆಧಾರ ಕಾರ್ಡ ತರಬೇಕು ಎಂದರು.
ನಾಗರಬೆಟ್ಟದ ಮುಖ್ಯ ಸಂಸ್ಥೆಯಲ್ಲಿ ನೀಡಲಾಗುತ್ತಿರುವ ಗುಣಮಟ್ಟದ ಶಿಕ್ಷಣವನ್ನೇ ಇಲ್ಲೂ ನೀಡಲಾಗುತ್ತದೆ. ರಾಜಸ್ಥಾನದ ಕೋಟಾ ಸೇರಿ ವಿವಿಧ ರಾಜ್ಯಗಳ ಪ್ರತಿಭಾವಂತ ಶಿಕ್ಷಕರು, ಉಪನ್ಯಾಸಕರನ್ನು ಬೋಧನೆಗೆ ನಿಯೋಜಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಮುದ್ದೇಬಿಹಾಳದ ಶಾಲೆ, ಕಾಲೇಜು ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತ್ಯುತ್ತಮ ಫಲಿತಾಂಶದ ಜೊತೆಗೆ ನೀಟ್, ಐಐಟಿ ಫೌಂಡೇಶನ್, ಜೆಇಇ, ಐಎಎಸ್, ಕೆಎಎಸ್ ಇನ್ನಿತರ ಸ್ಪರ್ಧಾತ್ಮಕ ಶಿಕ್ಷಣಕ್ಕೆ ಅನುಕೂಲವಾಗುವ ಬೋಧನೋಪಾಯಗಳನ್ನು ಇಲ್ಲಿ ಅಳವಡಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣದಲ್ಲಿ ನಮ್ಮ ಸಂಸ್ಥೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಪ್ರೌಢಶಾಲೆಯ ಮುಖ್ಯಾಧ್ಯಾಪಕ ರವಿ ಬಿರಾದಾರ ಮಾತನಾಡಿ ಪ್ರಸ್ತುತ ಎಸ್ಸೆಸ್ಸೆಲ್ಸಿವರೆಗೂ ಇರುವ ಆಕ್ಸಫರ್ಡ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಬಾರಿ ಶೇ.100ರಷ್ಟಾಗಿದೆ. ನಮ್ಮಲ್ಲಿ ಕಲಿತ ವಿದ್ಯಾರ್ಥಿಗಳು ಪ್ರತಿ ವರ್ಷವೂ ಗಣನೀಯ ಸಾಧನೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ನಮ್ಮ ಫಲಿತಾಂಶದಲ್ಲಿ ಏರಿಕೆ ಕಾಣುತ್ತಿರುವುದು ನಮ್ಮ ಗುಣಮಟ್ಟದ ಶಿಕ್ಷಣಕ್ಕೆ ಉದಾಹರಣೆಯಾಗಿದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಸರು ನೋಂದಾಯಿಸಲು ಮೋಬೈಲ್ 9380095756 ಸಂಖ್ಯೆಗೆ ವಿದ್ಯಾರ್ಥಿಯ ಹೆಸರು, ವರ್ಗ, ಶಾಲೆಯ ಹೆಸರು, ವಿಳಾಸ, ಮೋಬೈಲ್ ಸಂಖ್ಯೆ ಟೈಪ್ ಮಾಡಿ ಮೆಸೇಜ್ ಕಳಿಸಬೇಕು. ಮೆಸೇಜ್ ಕಳಿಸಲಾಗದವರು ನೇರವಾಗಿ ಅಂದೇ ಪರೀಕ್ಷೆಗೆ ಹಾಜರಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೋ: 9380095756, 7483930372, 8970507159, 9731796902 ಸಂಪರ್ಕಿಸಬಹುದು ಎಂದು ಅಮಿತ್‍ಗೌಡ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ರಾಜಶೇಖರ ಹಿರೇಮಠ ಇದ್ದರು