ಆಕ್ಷೇಪಾರ್ಹ ಹೇಳಿಕೆ: ತೀವ್ರ ಆಕ್ರೋಶ

ಬೀದರ್: ಆ.21:ದಲಿತರ ಕುರಿತು ನಟ ಹಾಗೂ ಪ್ರಜಾಕೀಯ ಪಕ್ಷದ ಅಧ್ಯಕ್ಷ ಉಪೇಂದ್ರ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಮುಖಂಡ ವಿನೋದಕುಮಾರ ಅಪ್ಪೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾದೆ ಮಾತೊಂದನ್ನು ಬಳಸಿ ದಲಿತರಿಗೆ ಅವಮಾನಿಸಿರುವುದು ತೀವ್ರ ಖಂಡನೀಯ ಎಂದು ಹೇಳಿದ್ದಾರೆ.

ಉಪೇಂದ್ರ ಅವರ ಹೇಳಿಕೆ ದಲಿತರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಅಸ್ಪøಶ್ಯತೆಯ ಮನಸ್ಥಿತಿ ಇನ್ನೂ ಜೀವಂತ ಇದೆ ಎನ್ನುವುದನ್ನು ತೋರಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಉಪೇಂದ್ರ ಹಾಗೂ ಅವರ ಅಭಿಮಾನಿಗಳು ದಲಿತರ ಕುರಿತು ಲಘುವಾಗಿ ಮಾತನಾಡುವುದನ್ನು ಸಹಿಸಲಾಗದು ಎಂದು ಎಚ್ಚರಿಸಿದ್ದಾರೆ.

ಉಪೇಂದ್ರ ಅವರು ಎಚ್ಚರಿಕೆಯಿಂದ ಮಾತನಾಡಬೇಕು. ಈ ರೀತಿಯ ಹೇಳಿಕೆ ಪುನರಾವರ್ತನೆಯಾದಲ್ಲಿ ಅವರ ಚಿತ್ರಗಳನ್ನು ಬಹಿಷ್ಕರಿಸಲಾಗುವುದು. ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.