ಆಕ್ಷಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಭೂಮಿ ಪೂಜೆ

ಹರಪನಹಳ್ಳಿ,:ಜೂ6: ನಾಡಿನಾದ್ಯಂತ ಕೋರೋನಾ ಸಾಂಕ್ರಾಮಿಕ ರೋಗದಿಂದ ಆಕ್ಷಿಜನ್ ಕೊರೆತೆಯಾಗಿ ಜನರು ಪ್ರಾಣ ಬಿಡುತ್ತಿದ್ದಾರೆ, ಹರಪನಹಳ್ಳಿ ತಾಲೂಕಿನಲ್ಲಿ  ಆಕ್ಷಿಜನ್ ಕೊರತೆ ಯಾಗಬಾರದು ಎಂದು ಈ ಉತ್ಪದನಾ ಘಟಕ ಸ್ಥಾಪನೆಗೆ ಮುಂದಾಗಿದ್ದೇವೆ  ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿ ಜಿ.ಮಲ್ಲಿಕಾರ್ಜನಪ್ಪ, ಶ್ರೀಮತಿ ಹಾಲಮ್ಮ ಚಾರಿಟಬಲ್ ಟ್ರಸ್ಟ್  ವತಿಯಿಂದ ಆಕ್ಷಿಜನ್ ಉತ್ಪಾದನಾ ಘಟಕ  ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ನಮ್ಮ ತಂದೆ ದಿ.ಜಿ.ಮಲ್ಲಿಕಾರ್ಜನಪ್ಪ,ತಾಯಿ ದಿ. ಹಾಲಮ್ಮ ಚಾರಿಟಬಲ್ ಟ್ರಸ್ಟ್  ನಿಂದ 60 ಲಕ್ಷ ರು.ಗಳ ವೆಚ್ಚದಲ್ಲಿ  ಆಕ್ಷಿಜನ್ ಜನರೇಟರ್ ಪ್ಲಾಂಟ್ ಸ್ಥಾಪನೆಯಾಗಲಿದ್ದು 15 ದಿನದೊಳಗೆ ಆಕ್ಷಿಜನ್ ಜನರೇಟರ್ ಕೂಡಿಸಲಾಗುವುದು, ಕೆಲಸ ಪೂರ್ಣಗೊಂಡ ಬಳಿಕ ಪ್ರತಿ ದಿನ 50-60 ರೋಗಿಗಳಿಗೆ ಆಕ್ಷಿಜನ್ ಪೂರೈಕೆ ಮಾಡಬಹುದು ಎಂದರು. ಲಘು ಕೋವಿಡ್ ಸೊಂಕಿತರೂ ಸಹ ಹೋಮ್ ಐಸೋಲೇಷನ್ ನಲ್ಲಿ ಇರದೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಅವರು ಮನವಿ ಮಾಡಿದರು.
ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ ಕೋರೋನಾ ಸಾಂಕ್ರಾಮಿಕ ರೋಗ ಸಾವಿರಾರು ಸಂಖ್ಯೆಯ ಜನರನ್ನು ಬಲಿ ತೆಗೆದು ಕೋಂಡಿದೆ ಈ ರೋಗಕ್ಕೆ ಸುರಕ್ಷತೆ ಬಹುಮುಖ್ಯವಾಗಿದ್ದು ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ. ಮತ್ತು ವೈಯಕ್ತಿಕ ಅಂತರದ ಅಗತ್ಯವಿದೆ.ಮುಖ್ಯಮಂತ್ರಿ ಯಡಿಯೂರಪ್ಪ  ಕೂಲಿ ಕಾರ್ಮಿಕರು. ಆಶಾ ಕಾರ್ಯಕರ್ತೆಯರಿಗೆ. ಮುಜಾರಾಯಿ ಇಲಾಖೆಯ ಆರ್ಚಕರಿಗೆ  ಅಡುಗೆ ಬಟ್ಟರಿಗೆ. ಮೀನುಗಾರರಿಗೆ ಸೇರಿದಂತೆ ವಿವಿಧ ವರ್ಗಗಳ ಜನರಿಗೆ 2 ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಎಂದರು.ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್ , ತಾಲ್ಲೂಕು ಬಿಜೆಪಿ ಅಧ್ಯಕ್ಷ  ಸತ್ತೂರು ಹಾಲೇಶ, ಉಪಾದ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ  ಜಿಲ್ಲಾ ಬಿಜೆಪಿ ಎಸ್.ಟಿ ಘಟಕದ ಕಾರ್ಯದರ್ಶಿ ಆರ್. ಲೋಕೇಶ, ತಾಲ್ಲೂಕು ಪಂಚಾಯಿತಿ ಸದಸ್ಯ ಟಿ. ನಾಗರಾಜಪ್ಪ, ಇತರರು ಇದ್ದರು.