ಆಕ್ಷನ್, ಸೆಂಟಿಮೆಂಟ್ ದುಬಾರಿ ‘ಮದಗಜ’

ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹು ನಿರೀಕ್ಷಿತ ಚಿತ್ರ “ಮದಗಜ” ಲೇಟಾದರೂ ಲೇಟೆಸ್ಟ್ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ಕನ್ನಡ, ತೆಲುಗು, ತಮಿಳು,ಮಲೆಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ.

ಈ ಮೂಲಕ ಕನ್ನಡದ ಮತ್ತೊಂದು ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರುತ್ತಿದೆ. ಈಗಾಗಲೇ ಹೆಸರು ಮಾಡಿರುವ ಚಿತ್ರಗಳಂತೆ ವಿವಿಧ ಭಾಷೆಗಳಲ್ಲಿ ಮೋಡಿ ಮಾಡಲು ಸಿದ್ದತೆ ಮಾಡಿದೆ.

ಆಯೋಗ್ಯ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಿರ್ದೇಶಕ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ “ ಮದಗಜ”. ದುಬಾರಿ ವೆಚ್ಚದಲ್ಲಿ ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

ಪಕ್ಕ ಆಕ್ಷನ್ ಮತ್ತು ಸೆಂಟಿಮೆಂಟ್ ಹೂರಣ ಹೊಂದಿರುವ ಚಿತ್ರದ ಚಿತ್ರೀಕರಣ ಮಕ್ಕಾಲು ಭಾಗ ಪೂರ್ಣಗೊಂಡಿದೆ. ಕೊರೊನಾ ಸೋಂಕು ಹೆಚ್ಚಳ, ಲಾಕ್ ಡೌನ್ ಜಾರಿ ಆಗದಿದ್ದರೆ ಈ ವೇಳೆಗೆ ಚಿತ್ರೀಕರಣ ಸಂಪೂರ್ಣವಾಗುತ್ತಿತ್ತು

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಕ ಮಹೇಶ್ ಕುಮಾರ್. ಮದಗಜ ಚಿತ್ರವನ್ನುಇದುವರೆಗೆ ಬೆಂಗಳೂರಿನಲ್ಲಿ 10 ದಿನ , ಉತ್ತರ ಪ್ರದೇಶದ ವಾರಣಾಸಿಯಲ್ಲಿ 20 ದಿನ ಹಾಗು ಮೈಸೂರಿನಲ್ಲಿ 30 ದಿನ ಚಿತ್ರೀಕರಣ ಮಾಡಲಾಗಿದೆ. ಎರಡು ಹಾಡು ಮತ್ತು ಎರಡು ಫೈಟು ಸೇರಿದಂತೆ ಇನ್ನೂ 18 ದಿನಗಳ ಚಿತ್ರೀಕರಣವನ್ನು ಚಿತ್ರ ತಂಡ ಬಾಕಿ ಉಳಿಸಿಕೊಂಡಿದೆ. ಇದುವರೆಗೆ ಒಟ್ಟಾರೆ 90 ಭಾಗದ ಚಿತ್ರೀಕರಣ ಸಂಪೂರ್ಣಗೊಂಡಿದೆ.

ನಮ್ಮ ತನ ಮತ್ತು ಸೊಗಡಿನ ಚಿತ್ರ ಮದಗಜ, ಆಯೋಗ್ಯ ಸಿನಿಮಾ ಮಾದರಿಯಲ್ಲಿ ಇರಲಿದೆಯಾದರೂ ಅದಕ್ಕಿಂತ ಅದ್ದೂರಿ ವೆಚ್ಚದಲ್ಲಿ ತಯಾರಾಗುತ್ತಿದೆ. ಎರಡು ರಾಜ್ಯಗಳ ಮಧ್ಯೆ ನಡೆಯುವ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗುತ್ತಿದೆ. ಆಕ್ಷನ್ ಜೊತೆಗೆ ಸೆಂಟಿಮೆಂಟ್ ಚಿತ್ರ. ಕುಟುಂಬ ಸಮೇತ ನೋಡಬಹುದು ಎನ್ನುವ ಭರವಸೆ ನೀಡಿದರು.

ನಟ ಶ್ರೀ ಮುರುಳಿ ಅವರಿಗೆ ಉತ್ತಮ ಪಾತವಿದೆ,ಹೀಗಾಗಿ ಆಕ್ಷನ್ ಪ್ರಿಯರಿಗೆ ಮನರಂಜನೆಯ ರಸದೌತಣ ಸಿಗಲಿದೆ. ಉಳಿದಂತೆ ಚಿತ್ರದಲ್ಲಿಆಶಿಕಾ ರಂಗನಾಥ್, ಜಗಪತಿ ಬಾಬು, ರಂಗಾಯಣ ರಘು, ದೇವಯಾನಿ, ಗರುಡ ,ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ ಮತ್ತಿತರಿದ್ದಾರೆ.

ರಾಜ್ಯ ಸರ್ಕಾರ ಚಿತ್ರೀರಣಕ್ಕೆ ಅನುಮತಿ ನೀಡಿದ ನಂತರ ಪರಿಸ್ಥಿತಿಯನ್ನು ನೋಡಿಕೊಂಡು ಚಿತ್ರೀಕರಣಕ್ಕೆ ತೆರಳುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎನ್ನುವ ಮಾಹಿತಿ ನೀಡಿದರು.

ಶೇ.90 ರಷ್ಟು ಪೂರ್ಣ

ನಟ ಶ್ರೀಮುರುಳಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮದಗಜ ಚಿತ್ರಕ್ಕೆ ಮಹೇಶ್ ಕುಮಾರ್ ಆಕ್ಷನ ಕಟ್ ಹೇಳಿದ್ದು, ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ. ಶೇ.90 ರಷ್ಟು ಚಿತ್ರೀಕರಣ ಮುಗಿದಿದ್ದು ಉಳಿದ ಭಾಗದ ಚಿತ್ರೀಕರಣಕ್ಕೆ ಅನುಮತಿಗಾಗಿ ತಂಡ ಎದುರು ನೋಡುತ್ತಿದೆ.