ಆಕ್ಷನ್ ,ಥ್ರಿಲ್ಲರ್ `ಹಂಟರ್’

ದಕ್ಷಿಣ ಭಾರತದ ಖ್ಯಾತ ಕಲಾವಿದರ ದಂಡು ಇರುವ ಆಕ್ಷನ್ ,ಥ್ರಿಲ್ಲರ್ ಕಥಾ ಹಂದರ ಒಳಗೊಂಡಿರುವ ” ಹಂಟರ್”. ಬಾಲಿವುಡ್ ನಟ ಕಬೀರ್ ಬೇಡಿ,  ದಕ್ಷಿಣ ಭಾರತದ ಖ್ಯಾತ ಕಲಾವಿದರಾದ ಸುಮನ್, ಶರತ್ ಕುಮಾರ್, ಸಾಧುಕೋಕಿಲ ಸೇರಿದಂತೆ ಹಿರಿ ಕಿರಿಯ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ.

ಚಿತ್ರೀಕರಣ ಸ್ಥಳಕ್ಕೆ ಪತ್ರಕರ್ತರನ್ನು ಆಹ್ವಾನಿಸಿದ್ದ ಚಿತ್ರ ತಂಡ ಚಿತ್ರದ ಬಗ್ಗೆ ಮಾಹಿತಿ‌ ನೀಡಿತು. ಈ ವೇಳೆ ನಿರ್ದೇಶಕ ವಿನಯ್ ಕೃಷ್ಣ ,ಚಿತ್ರ ಫೈಟ್ ನೊಂದಿಗೆ ಶುರುವಾಗಿ ಫೈಟ್ ನಲ್ಲೇ ಮುಕ್ತಾಯವಾಗುತ್ತದೆ.ಖ್ಯಾತ ಕಲಾವಿದರು ಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ.  ಜೂನ್ ವೇಳೆಗೆ ಚಿತ್ರೀಕರಣ ಮುಕ್ತಾಯವಾಗಲಿದೆ ಎಂದರು.

ನಾಯಕ ನಿರಂಜನ್ ಸುಧೀಂದ್ರ ಮಾತನಾಡಿ, ಆಕ್ಷನ್ ಚಿತ್ರವಾಗಿರುವುದರಿಂದ ಸಾಕಷ್ಟು ಅಭ್ಯಾಸ ಮಾಡಿದ್ದೇನೆ. ಉತ್ತರ ಹಾಗೂ ದಕ್ಷಿಣ ಭಾರತದ ದಿಗ್ಗಜ ನಟರೊಂದಿಗೆ ನಟಿಸುವ ಅವಕಾಶ ಚಿತ್ರದಲ್ಲಿ ಸಿಕ್ಕಿದೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ ಎನ್ನುವ ವಿವರ ನೀಡಿದರು.

ನಿರ್ಮಾಪಕ ತ್ರಿವಿಕ್ರಮ್ ಸಾಫಲ್ಯ  ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿ.ಎಪ್ಪತ್ತರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ನವೆಂಬರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದರು.

ನಟ ಸುಮನ್,ಹೆಡ್ ಕಾನ್ಸ್‌ಟೇಬಲ್ ಪಾತ್ರ ನಿರ್ವಹಣೆ ಮಾಡುತ್ತಿದ್ದೇನೆ.ಶರತ್ ಕುಮಾರ್ ಬಹಳ ದಿನಗಳ ನಂತರ ಒಟ್ಟಾಗಿ ಅಭಿನಯಿಸುತ್ತಿದ್ದೇವೆ ಎಂದರೆಣ ಶರತ್ ಕುಮಾರ್  ಪಾತ್ರ ಚೆನ್ನಾಗಿದೆ. ಈ ತಂಡದ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದರು‌. ನಾಯಕಿ ಸೌಮ್ಯ ಮೆನನ್, ಕೇರಳದವಳು ಕನ್ನಡದಲ್ಲಿ ಮೊದಲ ಚಿತ್ರ ಎಂದರು. ಛಾಯಾಗ್ರಹಕ ಜೈ ಆನಂದ್ ಮಾಹಿತಿ ನೀಡಿದರು.