ಆಕ್ಷನ್ ,ಥ್ರಿಲ್ಲರ್ ಮಾರ್ಟಿನ್ ಮುಂದಕ್ಕೆ

ಆಕ್ಷನ್ ,ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಮಾರ್ಟಿನ್   ಚಿತ್ರದ ಬಿಡುಗಡೆ ದಿನಾಂಕ ಮುಂದೆ ಹೋಗಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ.

ಧ್ರುವಸರ್ಜಾ  ಮತ್ತು  ಎಪಿ ಅರ್ಜುನ್ ಕಾಂಬಿನೇಶನ್‌  ದ್ವಿತೀಯ ಚಿತ್ರ ಇದು.ಸೆ.30ಕ್ಕೆ ಬಿಡುಗಡೆ ಮಾಡುವುದಾಗಿ  ನಿರ್ಧರಿಸಿ ಸಿದ್ದತೆಯೂ ನಡೆದಿತ್ತು,  ಬಾಕಿಯಿದ್ದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು  ನಟ ಧೃವ ಸರ್ಜಾಗೆ ಸಾಧ್ಯವಾಗಲಿಲ್ಲ, ಹೀಗಾಗಿ 10-12 ದಿನಗಳ ಕಾಲ ಚಿತ್ರೀಕರಣ ಮಾಡಬೇಕಿದ್ದ  ಭಾಗ ಸದ್ಯದಲ್ಲೇ ಚಿತ್ರೀಕರಿಸಲು ತಂಡ ಸಿದ್ದತೆ ಮಾಡಿಕೊಂಡಿದೆ.

ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇರುವುದರಿಂದ ಅಂದುಕೊಂಡ ದಿನಾಂಕದಲ್ಲಿ ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ, ಸದ್ಯದಲ್ಲೇ ಮುಂದಿನ ದಿನಾಂಕ ತಿಳಿಸುವುದಾಗಿ ನಿರ್ದೇಶಕ ಎ.ಪಿ ಅರ್ಜುನ್  ತಿಳಿಸಿದ್ದಾರೆ.

ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಧ್ರುವಸರ್ಜಾಗೆ ಜೋಡಿಯಾಗಿ ಕಾಣಿಸಿ ಕೊಂಡಿದ್ದಾರೆ.

ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು, ಇದರ ಜೊತೆಗೆ ಮಾತಿನಭಾಗ ಸೇರಿ ೧೬ ದಿನಗಳವರೆಗೆ ಕಾಶ್ಮೀರದಲ್ಲೇ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದು ಮಣಿಶರ್ಮಾ  ಸಂಗೀತ . ಸತ್ಯಹೆಗಡೆ  ಛಾಯಾಗ್ರಹಣವಿದೆ.