ಆಕ್ಷನ್, ಥ್ರಿಲ್ಲರ್ `ಮಾರಿಗೋಲ್ಡ್’

ನಟಿ ಸಂಗೀತ ಶೃಂಗೇರಿ ಮತ್ತು ನಟ ದಿಗಂತ್ ಮಂಚಾಲೆ ಅಭಿನಯದ “ಮಾರಿಗೋಲ್ಡ್” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆಗೂ ಮುನ್ನ ಲಿರಿಕಲ್ ಹಾಡು ಹಾಗು ಟ್ರೈಲರ್ ಬಿಡುಗಡೆ ಮಾಡಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ.

ಈ ನಡುವೆಯೇ ಏಪ್ರಿಲ್ 5ಕ್ಕೆ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶ ನಿರ್ಮಾಪಕ ರಘುವರ್ಧನ್ ಮತ್ತವರ ತಂಡದ್ದು. ರೋಮಾಂಟಿಕ್ ಹಿರೋ ಆಗಿ ಕಾಣಿಸಿಕೊಂಡಿದ್ದ ನಟ ದಿಗಂತ್, ಚಿತ್ರದ ಮೂಲಕ ಮಾಸ್ ಹೀರೋ ಆಗಿ ಬಡ್ತಿ ಪಡೆದಿದ್ದಾರೆ. ಮತ್ತೊಂದೆಡೆ ಸಂಗೀತ ಶೃಂಗೇರಿ ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಹೊರಬಂದ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ. ಹೀಗಾಗಿ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲುವಂತೆ ಚಿತ್ರ ಮಾಡಿದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ರಘುವರ್ಧನ್,ಆಕ್ಷನ್ ಥ್ರಿಲ್ಲರ್ ಜಾನರ್ ಚಿತ್ರ ಇದಾಗಿದೆ. ಚಿನ್ನದ ಬಿಸ್ಕತ್ತು ಮಾರಲು ಹೊರಟ ನಾಲ್ವರು  ಹುಡುಗರ ಕಥೆ. ಚಿತ್ರವನ್ನು ಬೆಂಗಳೂರು, ಸಕಲೇಶಪುರ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ ಎಂದರು.

ಕ್ರೈಮ್ ಥ್ರಿಲ್ಲರ್ ಜಾನರ್ ಸಿನಿಮಾ, ಒಳ್ಳೆಯ ಕಂಟೆಂಟ್ ಇದೆ. ದಿಗಂತ್ ಬಾಡಿ ಲಾಂಗ್ವೇಜ್, ಸಂಪೂರ್ಣ ಬದಲಾಗಿದೆ. ಜೊತೆಗೆ ನಟಿ ಸಂಗೀತಾ ಶೃಂಗೇರಿ ಲಕ್ಷಾಂತರ ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಲಿದೆ, ಚಿತ್ರದಲ್ಲಿ ಸಂಗೀತ ಡ್ಯಾನ್ಸರ್ ಪಾತ್ರ ಮಾಡಿದ್ದಾರೆ. ಬದುಕು ಕಟ್ಟಿಕೊಳ್ಳುವ ಪರದಾಡುವ ಪಾತ್ರ ಅವರದು ಎಂದರು

ಜೀವನ ಕಟ್ಟಿಕೊಳ್ಳಲು ಕನಸು ಕಂಡ ನಾಲ್ವರ ಹುಡುಗರು ಸಮಾಜದಲ್ಲಿ ಹಣ ಸಂಪಾದಿಸಲು ಮುಂದಾಗುತ್ತಾರೆ, ಇಂತಹ ಸಮಯದಲ್ಲಿ  ಒಂದು ಕಡೆ ಸಿಕ್ಕಿ ಹಾಕಿಕೊಳ್ತಾರೆ.ಅದರಿಂದ ಹೊರ ಬರ್ತಾರ ಅಂದುಕೊಂಡ ಕೆಲಸ ಸಾಧಿಸುತ್ತಾರೆ ಎನ್ನುವುದು ರೋಚಕವಾಗಿ ಮೂಡಿ ಬಂದಿದೆ ಎಂದು ಮಾಹಿತಿ ನೀಡಿದರು.

ರಾಘವೇಂದ್ರ ನಾಯ್ಕ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ವಜ್ರಾಂಗ್ ಶೆಟ್ಟಿ,  ಬಲರಾಜವಾಡಿ, ಮಹಂತೇಶ್, ಮತ್ತಿತರರಿದ್ದಾರೆ.