ಆಕ್ಷನ್, ಥ್ರಿಲ್ಲರ್ ಚಿತ್ರಕ್ಕೆ ನಂದ ಕಿಶೋರ್ ಆಕ್ಷನ್ ಕಟ್

* ಚಿಕ್ಕನೆಟಕುಂಟೆ ಜಿ.ರಮೇಶ್

“ಪೊಗರು” ಚಿತ್ರದ ಭರ್ಜರಿ ಯಶಸ್ಸಿನ ಬಳಿಕ‌ ನಿರ್ದೇಶಕ‌ ನಂದಕಿಶೋರ್ ಇದೀಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಯುವ ನಟ ಶ್ರೇಯಸ್ ಅವರಿಗಾಗಿ ಆಕ್ಷನ್ , ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಮತ್ತೊಂದು ಗೆಲುವಿನ ಉತ್ಸಾಹದೊಂದಿಗೆ ಕೆಲಸ ಆರಂಭಿಲು ಮುಂದಾಗಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಯುಗಾದಿ‌ ಹಬ್ಬ‌ ಕಳೆದ ಬಳಿಕ ತಿಂಗಳಾಂತ್ಯಕ್ಕೆ ಚಿತ್ರದ ಮುಹೂರ್ತ ನಡೆಯಲಿದೆ. ಪಕ್ಕಾ ,ಆಕ್ಷನ್, ‌ಎಮೋಷನ್ ಅಂಶಗಳೊಂದಿಗೆ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ಸಿದ್ದತೆ ಆರಂಭಿಸಿದ್ದಾರೆ.

ನಟ ಶ್ರೇಯಸ್ “ವಿಷ್ಣುಪ್ರಿಯ” ಚಿತ್ರ ಪೂರ್ಣಗೊಳಿಸಿದ್ದು ಚಿತ್ರ ಬಿಡುಗಡೆಗೆ ಸಜ್ಜಾಗಿದೆ.‌ಈ ನಡುವೆ ಶ್ರೇಯಸ್ಸ್ ಕೆ ಮಂಜು ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಚಿತ್ರ ಘೋಷಣೆ ಮಾಡಲಾಗಿದೆ ಗುಜ್ಜಲ್ ಪುರುಷೋತ್ತಮ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯ “ಪ್ರೊಡಕ್ಷನ್ ನಂ 1” ಹೆಸರಿನಲ್ಲಿ ಚಿತ್ರದ ಚಟುವಟಿಕೆಗಳು ಆರಂಭವಾಗಿದ್ದು, ಸದ್ಯದಲ್ಲೇ ಶೀರ್ಷಿಕೆ ಅನಾವರಣಗೊಳ್ಳಲಿದೆ‌. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ನಂದ‌ಕಿಶೋರ್, ಸದ್ಯಕ್ಕೆ ಶ್ರೇಯಸ್ ಮತ್ತು ನಾಯಕಿ ಯನ್ನು ಮಾತ್ರ ಆಯ್ಕೆ ಮಾಡಲಾಗಿದ್ದು ಉಳಿದ ಕಲಾವಿದರೆಲ್ಲಾ ಸಂಪೂರ್ಣ ಹೊಸಬರು. ಬೆಂಗಳೂರಿನಲ್ಲಿ ಇಡೀ ಚಿತ್ರವನ್ನು ಚಿತ್ರೀಕರಣ ಮಾಡುವ ಉದ್ದೇಶವೊಂದಲಾಗಿದೆ.ಒಳ್ಳೆಯ ಚಿತ್ರ ನೀಡುವ ಉದ್ದೇಶವಿದೆ ಎಂದರು.

ಇನ್ಜೂ ಪೊಗರು ಚಿತ್ರ ರಾಜ್ಯದ ಹಲವು ಕಡೆ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಮತ್ತೆ ಲಾಕ್ ಡೌನ್ ಅನ್ನುತ್ತಿದ್ದಾರೆ ಇದು ಮತ್ತಷ್ಟು ಆತಂಕ ಮೂಡಿಸಿದೆ ಎಂದರು.

ಉಳಿದಂತೆ ಇನ್ನೂ ಹೆಸರಿಡ ಚಿತ್ರಕ್ಕೆ ಧರ್ಮವಿಶ್ ಸಂಗೀತ ನೀಡುತ್ತಿರುವ ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ‌.

ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಸದ್ಯದಲ್ಲೇ ತಿಳಿಸುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಚಿತ್ರವನ್ನು ಎಲ್ಲೆಲ್ಲಿ ಚಿತ್ರೀಕರಣ ಮಾಡಲಾಗುತ್ತದೆ ಯಾರೆಲ್ಲಾ ಕಲಾವಿದರು ಇರಲಿದ್ದಾರೆ ಎನ್ನುವುದು ಸದ್ಯದಲ್ಲಿ ತಿಳಿಯಲಿದೆ.

ಆಕ್ಷನ್ ನಲ್ಲಿ ಸ್ಕೋರ್..

ನಟ ಶ್ರೇಯಸ್ ಈ ಬಾರಿ ಆಕ್ಷನ್ ನಲ್ಲಿ ಸ್ಕೋರ್ ಮಾಡಲಿದ್ದಾರೆ. ಅವರಿಗಾಗಿ ವಿಭಿನ್ನವಾದ ಆಕ್ಷನ್ ಕಂಪೋಸ್ ಮಾಡಲಾಗುತ್ತಿದೆ.ಜೊತೆಗೆ ಎಮೋಷನ್ ಕೂಡ ಇರಲಿದೆ. ಇದೊಂದು ಥ್ರಿಲ್ಲರ್ ಸಿನಿಮಾ.‌ಇಡೀ ಚಿತ್ರವನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.ನಾಯಕ,ನಾಯಕಿ ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಉಳಿದವರು ಹೊಸಬರು ಇರಲಿದ್ದಾರೆ. ಸದ್ಯದಲ್ಲಿಯೇ ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಾಗುವುದು

– ನಂದ ಕಿಶೋರ್, ನಿರ್ದೇಶಕ