ಆಕ್ರಮ ಪಡಿತರ ಅಕ್ಕಿ ಸಾಗಾಟ ಮುದಗಲ್ ಪೊಲೀಸ್‌ರ ದಾಳಿ

ಮುದಗಲ್,ಮಾ.೦೩-ಬಡವರ ಹಸಿವು ನೀಗಿಸುವ ಸಲುವಾಗಿ ಸರಕಾರ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ನೀಡಲಾಗುತ್ತಿದ್ದೆ ಆದರೆ ಆಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಿಎಸ್‌ಐ ಅಶೋಕ ಬೇವೂರು ರವರ ಆದೇಶದ ಮೇರೆಗೆ ಪೊಲೀಸ್ ಸಿಬ್ಬಂದಿಗಳು ಪಟ್ಟಣ ಸಮೀಪದ ಚಿಕ್ಕಲೆಕ್ಕಿಹಾಳ ಗ್ರಾಮದಲ್ಲಿ ಮಿಂಚಿನ ದಾಳಿ ಮಾಡಿ ಅಕ್ರಮ ಪಡಿತರ ಅಕ್ಕಿ ಹಾಗೂ ವಾಹನ ವಶಪಡಿಸಿಕೊಂಡಿದ್ದಾರೆ.
ಸಜ್ಜಲಗುಡ್ಡ ಗ್ರಾಮದ ಮೇಘರಾಜ ವೀರಭದ್ರಪ್ಪ (೨೯ ವರ್ಷದ ) ಎಂಬುವರು ಚಿಕ್ಕಲೆಕ್ಕಿಹಾಳ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಪಡಿತರ ಅಕ್ಕಿ ಖರೀದಿ ಮಾಡುತ್ತಿದ್ದಾರೆ ಎಂದು ದೂರು ನೀಡದ ಹಿನ್ನಲೆಯಲ್ಲಿ ಮುದಗಲ್ ಪಿಎಸ್‌ಐ ಅಶೋಕ ಬೇವೂರು ರವರ ಆದೇಶದ ಮೇರೆಗೆ ಚಿಕ್ಕಲೆಕ್ಕಿಹಾಳ ಗ್ರಾಮದಲ್ಲಿ ಟಾಟಾ ಎಸಿ ಸಪ್ರೊ ಮನಿ ಟ್ರಕ್ ವಾಹನದಲ್ಲಿ ಅಂದಾಜು ೫೦ ಕಿ, ಜಿ ತೂಕದ ೨೦ ಅಕ್ಕಿ ಚೀಲಗಳು ಇದ್ದು ೧೦ಕ್ವಿಟಲ್ ಅಂದಾಜು ೧೫೦೦೦ ಸಾವಿರ ಮೊತ್ತದ ಬೆಲೆ ಬಾಳುವ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮುದಗಲ್ ಪೊಲೀಸ್ ಠಾಣೆಯ ಎಎಸ್‌ಐ ವೆಂಕಟಪ್ಪ ನಾಯಕ, ಪೊಲೀಸ್ ಸಿಬ್ಬಂದಿ ಅನಿಲಕುಮಾರ, ಮುರಾರಿ ನಾಯ್ಕ್, ಕರ್ನಾಟಕ ರಕ್ಷಣಾ ವೇದಿಕೆ ಜಿಲಾನಿ ಪಾಷಾ, ಮುದಗಲ್ ಘಟಕದ ಕಾರ್ಯಾಧ್ಯಕ್ಷ ಎಸ್ , ಎನ್, ಖಾದ್ರಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು