ಆಕ್ಟ್ 1978 ಟ್ರೈಲರ್ ಬಿಡುಗಡೆ

ಅರಿವು, ನಾತಿಚರಾಮಿ ಚಿತ್ರ ನಿರ್ದೇಶಿಸಿದ್ದ ಮಂಸೋರೆ ಆಕ್ಟ್ 1978 ಎಂಬ ಥ್ರಿಲ್ಲರ್ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಸೆನ್ಸಾರ್ ಮಂಡಳಿ `ಯು’ ಪ್ರಮಾಣಪತ್ರ ನೀಡಿದೆ.

ನಿರ್ದೇಶಕ ಮಂಸೋರೆ ಒಬ್ಬ ಗರ್ಭಿಣಿ ಹೆಂಗಸು, ಒಂದು ಗನ್, ವಾಕಿಟಾಕಿ, ಬಾಂಬ್ ನಾಲ್ಕು ಪ್ರಮುಖ ಅಂಶಗಳನ್ನು ಇಟ್ಟುಕೊಂಡು ಕಥೆ ಮಾಡಿದ್ದೇನೆ. ಮೂರು ಟ್ರ್ಯಾಕ್‍ನಲ್ಲಿ ಚಿತ್ರಕಥೆ ಸಾಗುತ್ತದೆ. ಗರ್ಭಿಣಿಯ ಪಾತ್ರಕ್ಕೆ ಕನ್ನಡ ಸರಿಯಾಗಿ ಬರುವಂಥ ಒಬ್ಬ ನಟಿ ಬೇಕಾಗಿತ್ತು, ಆಗ ನಟಿ ಯಜ್ಞಾ ಶೆಟ್ಟಿ ಬಂದರು.

ಸುಮಾರು 52 ಜನ ಪ್ರಮುಖ ಪಾತ್ರಧಾರಿಗಳು ಚಿತ್ರದಲ್ಲಿದ್ದಾರೆ. ಬಿಗ್ ಪ್ರಾಜೆಕ್ಟ್ ಆದರೂ ಕಡಿಮೆ ಅವಧಿಯಲ್ಲಿ ಪ್ಲಾನ್ ಮಾಡಿದ್ದೇವೆ. 9ಕ್ಕೆ ಮುಹೂರ್ತ ನಡೆಸಿ ಸೆಪ್ಟೆಂಬರ್‍ನಲ್ಲಿ ಶೂಟಿಂಗ್ ಸ್ಟಾರ್ಟ್ ಮಾಡಿ ಒಂದೇ ತಿಂಗಳಲ್ಲಿ ಮುಗಿಸಿದೆವು. ಚಿತ್ರದ ಮುಖ್ಯಕಥೆ ನಡೆಯೋದೇ ಒಂದು ಬಿಲ್ಡಿಂಗ್‍ನಲ್ಲಿ, 15 ದಿನ ಬಿಲ್ಡಿಂಗ್ ಒಳಗೆ, 15 ದಿನ ಹೊರಾಂಗಣದಲ್ಲಿ ಶೂಟ್ ಮಾಡಿದ್ದೇವೆ.

ಚಿತ್ರವನ್ನು 3 ಕ್ಯಾಮೆರಾ ಬಳಸಿ ಸೆರೆ ಹಿಡಿದಿದ್ದೇವೆ. ಅರಿವು ಒಬ್ಬ ತಂದೆ ಮಗನ ಸಂಬಂಧವನ್ನು ಹೇಳಿದರೆ, ನಾತಿಚರಾಮಿ ಆಧುನಿಕ ಮಹಿಳೆಯರ ಕಥೆ ಹೇಳುತ್ತದೆ, ಚಿತ್ರದಲ್ಲಿ ಸಮಾಜದ ಲೂಪ್ ಹೋಲ್‍ಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದೇನೆ. ನನ್ನ ಇಡೀ ಕಥೆಯ ಮೂಡ್‍ಗೆ ತಕ್ಕಹಾಗೆ ಮ್ಯೂಸಿಕ್ ಮಾಡುವುದು ಒಂದು ಸವಾಲಿನ ಕೆಲಸವಾಗಿತ್ತು. ಅದನ್ನು ರೋನಾಡ ಬಕ್ಕೇಶ್ ಹಾಗೂ ರಾಹುಲ್ ಶಿವಕುಮಾರ ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು.

ಟ್ರೈಲರ್ ಬಿಡುಗಡೆ ಮಾಡಿದ ಮಾಡಿದ ಪುನೀತ್ ರಾಜ್‍ಕುಮಾರ್,ಹಿರಿಯ ನಟಿ ಶೃತಿ,ಸಂಚಾರಿ ವಿಜಯ್ ತಂಡಕ್ಕೆ ಶುಭಕೋರಿದರು

ಟಿಕೆ ದಯಾನಂದ್ ಚಿತ್ರಕಥೆ ಮತ್ತು ಸಂಭಾಷಣೆ,ದೇವರಾಜ್ ಆರ್. ನಿರ್ಮಾಪಕರು. ಸತ್ಯ ಹೆಗಡೆ ಕ್ಯಾಮೆರಾ ಚಿತ್ರಕ್ಕಿದೆ. ಪ್ರಮೋದ್ ಶೆಟ್ಟಿ, ಸಂಚಾರಿ ವಿಜಯ್, ಬಿ.ಸುರೇಶ್, ಅಚ್ಯುತ್‍ಕುಮಾರ್, ಕೃಷ್ಣಾ ಹೆಬ್ಬಾಳೆ, ದತ್ತಣ್ಣ, ಶರಣ್ಯ, ಶೋಭರಾಜ್ ಅವಿನಾಶ್, ರಾಘು ಶಿವಮೊಗ್ಗ ಚಿತ್ರದಲ್ಲಿದೆ.