ಆಕಾಶ್ ಆನಂದ್ ನಿಯೋಜನೆ ಕೈಬಿಟ್ಟ ಮಾಯವತಿ

ಲಕ್ನೋ,ಮೇ.೮- ಬಹುಜನ ಸಮಾಜವಾದಿ ಮುಖ್ಯಸ್ಥೆ ಮಾಯಾವತಿ ತನ್ನ ರಾಜಕೀಯ ಉತ್ತರಾಧಿಕಾರಿಯಾಗಿ ಹಾಗು ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ಸೋದರ ಸಂಬಂಧಿ ಆಕಾಶ್ ಆನಂದ್ ಅವರನ್ನು ನಿಯೋಜನೆ ಮಾಡಿದ್ದನ್ನು ಕೈಬಿಟ್ಟಿರುವುದಾಗಿ ತಡರಾತ್ರಿ ಘೋಷಿಸಿದ್ದಾರೆ

ಆಕಾಶ್ ಆನಂದ್ ಲಂಡನ್‌ನಲ್ಲಿ ಎಂಬಿಎ ಪಡೆದಿದ್ದು ಅವರನ್ನು ತನ್ನ ನಿಯೋಜಿತ ರಾಜಕೀಯ ಉತ್ತರಾಧಿಕಾರಿ ಮತ್ತು ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ನೇಮಕ ಮಾಡಲಾಗಿತ್ತು. ಅವರು “ಪ್ರಬುದ್ಧರಾಗುವವರೆಗೆ” ಅವಳಿ ಜವಾಬ್ದಾರಿಯಿಂದ ಕೈಬಿಡುತ್ತಿರುವುದಾಗಿ ಪ್ರಕಟಿಸಿದ್ದಾರೆ.

ಏಪ್ರಿಲ್ ೨೮ ರಂದು ಸೀತಾಪುರ ಮತ್ತು ಉನ್ನಾವೊದಲ್ಲಿ ಚುನಾವಣಾ ಭಾಷಣಗಳಲ್ಲಿ “ಅಸಂಸದೀಯ ಭಾಷೆ” ಬಳಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಪೊಲೀಸರು ತಮ್ಮ ಕಿರಿಯ ಸಹೋದರ ಆನಂದ್ ಕುಮಾರ್ ಅವರ ಮಗ ಆಕಾಶ್ ಮೇಲೆ ಹೊರಿಸಿದ ಕೆಲವು ದಿನಗಳ ನಂತರ ಮಾಯಾವತಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಆಕಾಶ್ ಅವರು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ದ ನೇರ ವಾಗ್ದಾಳಿ ನಡೆಸಿದ್ದರು ಅಲ್ಲದೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವಂತೆ ತಮ್ಮ ಬೆಂಬಲಿಗರನ್ನು ಪ್ರಚೋದಿಸಿದ್ದಾರೆ ಎನ್ನುವ ಆರೋಪ ಹೊತ್ತಿದ್ದಾರೆ

ಆಕಾಶ್ ಅವರಲ್ಲದೆ ೩೯ ಮಂದಿಯನ್ನು ಎಫ್‌ಐಆರ್‌ನಲ್ಲಿ ಹೆಸರಿಸ ಲಾಗಿದೆ. ಒಡಹುಟ್ಟಿದ ಸಹೋದರ ಮತ್ತು ಆಕಾಶ್ ಅವರ ತಂದೆಗೆ ಪಕ್ಷ ನೀಡಿದ ಜವಾಬ್ದಾರಿಗಳನ್ನು ಮುಂದುವರಿಸುತ್ತಾರೆ ಎಂದು ಮಾಯಾವತಿ ಹೇಳಿದ್ದಾರೆ.

ಬಿಎಸ್‌ಪಿ ಕೇವಲ ಒಂದು ಪಕ್ಷವಾಗಿರದೆ ಬಿಆರ್ ಅಂಬೇಡ್ಕರ್ ಅವರು ಪ್ರಾರಂಭಿಸಿದ ಚಳವಳಿಯ ಮುಂದುವರಿಕೆಯಾಗಿದೆ ಕಾನ್ಶಿರಾಮ್ ಮತ್ತು ನಾವು ಸಂಪೂರ್ಣ ಜೀವನವನ್ನು ಪಕ್ಷಕ್ಕಾಗಿ ಮುಡಿಪಾಗಿಟ್ಟಿದ್ದೇವೆ. “ಈ ಆಂದೋಲನವನ್ನು ಮುಂದಕ್ಕೆ ಕೊಂಡೊಯ್ಯಲು ಪಕ್ಷ ಹೊಸ ಪೀಳಿಗೆಯನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕನನ್ನಾಗಿ ಮಾಡಲಾಗಿತ್ತು. ಮತ್ತು ಅವರನ್ನು ನನ್ನ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದು ಆದರೆ ಅಸಂಬದ್ದ ಹೇಳಿಕೆಗಳಿಂದ ಪಕ್ಷಕ್ಕೆ ಮುಜಗರವಾಗುತ್ತಿದೆ. ಹೀಗಾಗಿ ಅವರಿಗೆ ಪ್ರಬುದ್ಧತೆ ಬರುವ ತನಕ ಈ ಎರಡೂ ಹುದ್ದೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.

“ಪಕ್ಷದ ಹಿತಾಸಕ್ತಿ ಮತ್ತು ಬಾಬಾಸಾಹೇಬರ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ತ್ಯಾಗ ಮಾಡುವುದರಿಂದ ಬಿಎಸ್ಪಿ ಎಂದಿಗೂ ಹಿಂದೆ ಸರಿಯುವುದಿಲ್ಲ.” ಮಾಯಾವತಿಯವರ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಲ್ಪಟ್ಟ ನಂತರ ಉತ್ತರ ಪ್ರದೇಶದ ಪ್ರಚಾರದಲ್ಲಿ ಆಕಾಶ್ ಅವರ ಮೊದಲ ಅನುಭವವಾಗಿದೆ.