ಆಕಾಶವಾಣಿ ಫೋನ್ ಇನ್ :ಡಾ. ಗಿರೀಶ್ ಬದೋಲೆ ಅವರಿಂದ ಮತದಾರ ಜಾಗೃತಿ

ಕಲಬುರಗಿ,ಏ.11: ಆಕಾಶವಾಣಿಯ ಜೊತೆ ಜೊತೆಯಲಿ ನೇರ ಫೋನ್ ಇನ್ ಸಂವಾದ ಕಾರ್ಯಕ್ರಮದಲ್ಲಿ ಏಪ್ರಿಲ್ 12 ರಂದು ಬೆಳಿಗ್ಗೆ 10:30 ನಿಮಿಷದಿಂದ 11.30 ರವರೆಗೆ ಮತದಾರರ ಜಾಗೃತಿ ಕಾರ್ಯಕ್ರಮ ಬಿತ್ತರಗೊಳ್ಳಲಿದೆ ಈ ಕಾರ್ಯಕ್ರಮದಲ್ಲಿ ಸ್ವೀಪ್ನ ಅಧ್ಯಕ್ಷರು ಹಾಗೂ ಕಲಬುರ್ಗಿ ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯನಿರ್ವಾಹಕರಾದ ಡಾ. ಗಿರೀಶ್ ಬದೋಲೆ ಭಾಗವಹಿಸಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಮೇ10 ರಂದು ನಡೆಯುವ. ಮತದಾನ ಸಂದರ್ಭದಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಮತ್ತು ಮತದಾನದ ಪ್ರಮಾಣವನ್ನು ಹೆಚ್ಚಿಸುವ ಹಾಗೂ ಸುಗಮ ಮತದಾನದ ವ್ಯವಸ್ಥೆಯ ಬಗ್ಗೆ ಕೇಳುಗರು ಪ್ರಶ್ನೆಗಳನ್ನು ಕೇಳಬಹುದು. ಈ ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ಅವರು ನಡೆಸಿಕೊಡಲಿದ್ದಾರೆ.ಆಸಕ್ತರು ಆಕಾಶವಾಣಿಯ ದೂರವಾಣಿ 295986 ಮತ್ತು295987 ( ಎಸ್ ಟಿ ಡಿ ಸಂಖ್ಯೆ 08472) ಸಂಖ್ಯೆಗೆ ಸಂಪರ್ಕಿಸಿ ಪ್ರಶ್ನೆಗಳನ್ನು ಕೇಳಬಹುದು ಎಂದು ಆಕಾಶವಾಣಿಯ ಪ್ರಕಟಣೆ ತಿಳಿಸಿದೆ