ಕಲಬುರಗಿ,ಮೇ.29: ಆಕಾಶವಾಣಿಯ “ಜೊತೆ ಜೊತೆಯಲಿ’ ನೇರ ಫೋನ್ ಇನ್ ಸಂವಾದದಲ್ಲಿ ಮೇ 31ರಂದು (ನಾಳೆ) ಬೆಳಿಗ್ಗೆ 10.30 ರಿಂದ 11:30 ರವರೆಗೆ ನೂತನ ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲ್ ಅವರು ಕೇಳುಗರೊಡನೆ ಸಂವಾದ ನಡೆಸಲಿದ್ದಾರೆ.
“ಕಲ್ಬುರ್ಗಿಯ ಅಭಿವೃದ್ಧಿಗೆ ಹೊಸ ಸ್ಪರ್ಶ ” ಈ ಕುರಿತಾಗಿ ನೂತನ ಶಾಸಕರು ಸಾರ್ವಜನಿಕ ರೊಡನೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.ಪ್ರಾದೇಶಿಕ ಕೇಂದ್ರವಾದ ಕಲ್ಬುರ್ಗಿಯ ಅಭಿವೃದ್ಧಿಗೆ ಹೊಸ ಸ್ವರೂಪ ಕೊಡುವ ಕುರಿತಾಗಿ ಸಾರ್ವಜನಿಕರು ನೂತನ ಶಾಸಕರೊಂದಿಗೆ ಚರ್ಚೆ ನಡೆಸಿ ಈ ಭಾಗದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಬಹುದು. ಈ ಕಾರ್ಯಕ್ರಮವನ್ನು ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ನಡೆಸಿಕೊಡಲಿದ್ದಾರೆ.
ಆಸಕ್ತ ಕೇಳುಗರು ಆಕಾಶವಾಣಿ ಕೇಂದ್ರದ 295986 ಮತ್ತು 295987 (ಎಸ್ ಟಿ ಡಿ ಸಂಖ್ಯೆ 08472) ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಪ್ರಶ್ನೆಗಳನ್ನು ಕೇಳಬಹುದು ಎಂದು ಕಲಬುರ್ಗಿ ಆಕಾಶವಾಣಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.